ಬದುಕಿರುವಾಗಲೇ ತನ್ನ ಅಂತ್ಯಕ್ರಿಯೆ ಹೀಗೆಯೇ ನಡೆಯಬೇಕು ಎಂದು ಕಂಡೀಶನ್ ಹಾಕಿದ ಮಹಿಳೆ | ಆಕೆಯ ನವ ಷರತ್ತುಗಳು ಯಾವುವು ಗೊತ್ತಾ??

ಹುಟ್ಟು-ಸಾವು ಎಂಬುದು ಭಗವಂತನ ಸೃಷ್ಟಿ. ಈ ಬದುಕಲ್ಲಿ ಹೇಗಿರುತ್ತೇವೆ ಎಂಬುದು ನಮ್ಮಆಲೋಚನೆಯ ಮೇಲೆ ನಿಂತಿರುತ್ತದೆ. ಹೀಗೆ ಕೆಲವೊಂದಿಷ್ಟು ಜನ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕು,ಉತ್ತಮ ಸಾಧನೆಗಳನ್ನು ಮಾಡಬೇಕು ಎಂಬೆಲ್ಲ ಕನಸು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಅದರಲ್ಲೂ ಮುಖ್ಯವಾಗಿ ಮದುವೆಯೆಂಬುದು ಪ್ರತಿಯೊಬ್ಬರ ಜೀವನದ ಮುಖ್ಯ ಘಟ್ಟ. ಹೀಗಿರುವಾಗ ಅದೆಷ್ಟು ಜನ ತನ್ನ ಸಂಗಾತಿ ಹೀಗಿರಬೇಕು ಹಾಗಿರಬೇಕು ಎಂಬ ಷರತ್ತುಗಳನ್ನು ಆತನಿಗೆ ವಿಧಿಸುತ್ತಾರೆ.ಇಂತಹ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆದ್ರೆ ವಿಶೇಷ ಏನಪ್ಪಾ ಅಂದ್ರೆ ಇಲ್ಲೊಬ್ಬಳು ತಾನು ಸತ್ತ ಮೇಲೆ ತನ್ನ ಅಂತ್ಯಕ್ರಿಯೆಯನ್ನು ಹೇಗೆ ನಡೆಸಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದಾಳೆ.

ನೀವು ಅಂದುಕೊಳ್ಳಬಹುದು,ಸತ್ತ ಮೇಲೆ ಈಕೆಯ ಷರತ್ತುಗಳನ್ನು ಯಾರು ಪಾಲಿಸುತ್ತಾರೆ ಎಂದು. ಆದರೆ ಇದು ಆಶ್ಚರ್ಯವಾದರೂ ಸತ್ಯ ಸಂಗತಿ.ಹೌದು.ಮಹಿಳೆಯೊಬ್ಬರು ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ಈಗಾಗಲೇ ಒಂಭತ್ತು ನಿಯಮಗಳನ್ನು ಹೊರತಂದಿದ್ದಾಳೆ. ಇದರ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ಭಾರಿ ವಿಸ್ಮಯವನ್ನೇ ಸೃಷ್ಟಿಸಿದ್ದಾಳೆ.ಅಷ್ಟಕ್ಕೂ ಆಕೆ ತನ್ನ ಅಂತ್ಯಕ್ರಿಯೆಗೆ ಆಗಮಿಸುವ ಅತಿಥಿಗಳಿಗೆ ಖಡಕ್ಕಾಗಿ ನೀಡಿರುವಂತಹ ಒಂಭತ್ತು ನಿಯಮಗಳು ಯಾವ್ಯಾವುದು ಗೊತ್ತಾ!?.. ಇಲ್ಲಿದೆ ನೋಡಿ

*ಮೊದಲನೆಯದಾಗಿ ಈಕೆಯೊಂದಿಗೆ ತೆಗೆದಿರುವ ಫೋಟೋವನ್ನು ಅಂತ್ಯಕ್ರಿಯೆಗೆ ತರಬೇಕು.ಅದು ಹಳೆಯ ಚಿತ್ರವಾಗಿರಬಹುದು ಅಥವಾ ಇತ್ತೀಚಿನ ಚಿತ್ರವಾಗಿರಬಹುದು. ಆದರೆ, ಫೋಟೋ ಹೊಂದಿರದವರು ತನ್ನ ಅಂತ್ಯಕ್ರಿಯೆಗೆ ಬರಬಾರದು. ತನ್ನ ಜೀವನ ಅಥವಾ ಸಾವಿನಲ್ಲಿ ನಕಲಿಗಳೊಂದಿಗೆ ತಾನು ವ್ಯವಹರಿಸುವುದಿಲ್ಲ ಎಂದು ತಿಳಿಸಿದ್ದಾಳೆ.

*ಅಂತ್ಯಕ್ರಿಯೆಗೆ ಬರುವವರು ಲೈಟ್ ಗ್ಲಾಮ್ ಲುಕ್ ಧರಿಸಿರಬೇಕು. ಏಕೆಂದರೆ ಪೆಟ್ಟಿಗೆಯಲ್ಲಿ ಮಲಗಿರುವಾಗಲೂ ಆಕೆ ಕ್ಯಾಸ್ಕೆಟ್ ರೆಡಿ ಆಗಿರಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ. ಅತಿಥಿಗಳ ದುಃಖದ ಉಸಿರು, ಸಾವಿನಲ್ಲಿ ತನ್ನನ್ನು ಗೌರವಿಸುತ್ತೀರಿ ಎಂದು ನಂಬುವುದಾಗಿ ವಿವರಿಸಿದ್ದಾಳೆ.

*ಮಹಿಳೆಯ ಅಂತ್ಯಕ್ರಿಯೆಯ ಭಾಷಣಗಳನ್ನು ಮಾಡುವಾಗ ಐದು ನಿಮಿಷಗಳಿಗಿಂತ ಕಡಿಮೆಯಿರಬೇಕೆಂದು ಕಡ್ಡಾಯಗೊಳಿಸಿದ್ದಾಳೆ. ಅಲ್ಲದೆ, ಅತಿಥಿಗಳು ಕಪ್ಪು ಬಣ್ಣದ ಉಡುಪು ಧರಿಸುವ ನಿಯಮವನ್ನು ಅನುಸರಿಸಲು ಈಕೆ ಬಯಸುವುದಿಲ್ಲ. ಅತಿಥಿಗಳು ಬೇರೆ ಬಣ್ಣದ ಉಡುಪನ್ನು ಧರಿಸಬೇಕು ಮತ್ತು ಮನಸ್ಥಿತಿಯನ್ನು ಹಗುರಗೊಳಿಸಬೇಕು ಎಂದು ಹೇಳಿದ್ದಾಳೆ.

*ಅಷ್ಟೇ ಅಲ್ಲ, ಮಹಿಳೆಯು ಈಗಾಗಲೇ ಆಹಾರದ ಮೆನುವನ್ನು ಸಹ ಸಿದ್ಧಪಡಿಸಿದ್ದಾಳೆ. ಸಹಜವಾಗಿ, ಆಕೆ ತನ್ನ ಪೆಟ್ಟಿಗೆಯಲ್ಲಿ ಒಂದು ತಟ್ಟೆಯನ್ನು ಇಡಲು ಬಯಸುತ್ತಾಳೆ.ಇನ್ನು ಬಾರ್ ಕೌಂಟರ್‌ನಿಂದ ಕನಿಷ್ಠ ಎರಡು ಪಾನೀಯಗಳನ್ನಾದ್ರೂ ಇಡುವಂತೆ ಕೇಳಿಕೊಂಡಿದ್ದಾಳೆ.

*ಹಾಗೆಯೇ ಈಕೆಯ ಅಂತ್ಯಕ್ರಿಯೆಯ ಕೊನೆಯ ನಿಯಮದ ಪ್ರಕಾರ, ಅಂತ್ಯಕ್ರಿಯೆಗೆ ಬಂದಿರುವವರು ಗರಿಷ್ಠ 20 ನಿಮಿಷಗಳಷ್ಟು ಮಾತ್ರ ಅಳುವಂತೆ ಸಮಯ ನಿಗದಿಪಡಿಸಲಾಗಿದೆ.

ಒಟ್ಟಾರೆ ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗಿದ್ದು,ನಾಲ್ಕು ಮಿಲಿಯನ್ ಗೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಸಖತ್ ಸದ್ದು ಮಾಡುತ್ತಿದೆ. ಕೆಲವೊಬ್ಬರು ಇದನ್ನು ಹಾಸ್ಯಮಯವಾಗಿ ಸ್ವೀಕರಿಸಿದರೆ, ಇನ್ನೂ ಕೆಲವೊಂದಿಷ್ಟು ಜನ ಇಂಥವರೂ ಕೂಡ ಇದ್ದಾರಾ!?ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.