“ಲಿವ್ ಇನ್ ರಿಲೇಷನ್ ” ಕಾಮಪ್ರಚೋದಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ: ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮದುವೆ ಆಗದೆ ಗಂಡ ಹೆಂಡತಿಯ ಹಾಗೇ ಸಹಬಾಳ್ವೆ ‌ನಡೆಸುವುದು ಇತ್ತೀಚಿನ ಕಾಲಘಟ್ಟದಲ್ಲಿ ಸಾಮಾನ್ಯವಾಗಿದೆ. ಈ ಸಂಬಂಧವನ್ನು ‘ಲಿವ್ ಇನ್ ರಿಲೇಷನ್ ಶಿಪ್’ ಎಂದು ಹೇಳುತ್ತಾರೆ. ಇಲ್ಲಿ ಇಬ್ಬರಿಗೂ ಯಾವುದೇ ಕಂಡೀಷನ್ ಇರುವುದಿಲ್ಲ. ಇದೊಂದು ಪಾಶ್ಚಾತ್ಯ ಕ್ರಮವಾಗಿದ್ದು, ಭಾರತಕ್ಕೆ ಕಾಲಿಟ್ಟು ಸುಮಾರು ವರ್ಷಗಳೇ ಕಳೆದು ಹೋಗಿದೆ. ಈ ಸಂಬಂಧದಲ್ಲಿ ವ್ಯಕ್ತಿ ಇಷ್ಟ ಆಗದಿದ್ದರೆ ಬಿಟ್ಟು ಹೋಗಬಹುದು ಎಂಬ ರೂಲ್ಸ್ ಕೂಡಾ ಇದೆ.

 

ಆದರೆ ಈ ‘ಲಿವಿಂಗ್ ಟುಗೆದರ್’ ಸಂಬಂಧದಿಂದ ತೀವ್ರ ತರವಾದ ಮಾನಸಿಕ ಕಿರಿಕಿರಿಯನ್ನು ಅನುಭವಿಸಿದ ಮಹಿಳೆಯೋರ್ವಳು ದೂರನ್ನು ದಾಖಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಈಕೆಯ ಜೊತೆಗಿದ್ದ ಯುವಕನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಘಟನೆ ವಿವರ : ದೂರುದಾರೆ ಈ ರೀತಿಯ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದ ಮಹಿಳೆ. ಎರಡು ಬಾರಿ ಗರ್ಭಿಣಿಯಾಗಿದ್ದಳು. ಆದರೆ ಯುವಕನ ಒತ್ತಡದಿಂದ ಗರ್ಭಪಾತ ಮಾಡಿದ್ದಾಳೆ‌. ಅನಂತರ ಏನೋ ಕಾರಣದಿಂದ ಇವರಿಬ್ಬರ ಸಂಬಂಧವು ಮುರಿದು ಬಿದ್ದಿದೆ. ಮಹಿಳೆ ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಆದರೆ ಮೊದಲ ಯುವಕ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಮಹಿಳೆ ಹಾಗೂ ಆಕೆಯ ಇಡೀ ಕುಟುಂಬವನ್ನು ಹೊಣೆಗಾರರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಹಾಕಿದ್ದಾನೆ. ಈ ಬೆಳವಣಿಗೆಯಿಂದ ಮಹಿಳೆಯ ನಿಶ್ಚಿತಾರ್ಥ ಕೂಡಾ ಮುರಿದು ಬಿತ್ತು. ಈ ಘಟನೆ ಇಂದೋರ್ ನಲ್ಲಿ ನಡೆದಿದೆ.

ಈ ಪ್ರಕರಣದ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್’ಲಿವಿಂಗ್ ಟುಗೆದರ್’ ಸಂಬಂಧಗಳು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತವೆ ಹಾಗೂ ಅಶ್ಲೀಲತೆಯನ್ನು ಉತ್ತೇಜಿಸುತ್ತಿವೆ ಎಂದು ಹೇಳಿದೆ.

ಹಾಗಾಗಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 25 ವರ್ಷದ ಯುವಕನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಸಂಬಂಧಗಳಿಂದ
ಉಂಟಾಗುವ ಇಂತಹ ಅಪರಾಧಗಳ ಉಲ್ಬಣವನ್ನು
ಗಮನಿಸಿದರೆ, ಲಿವ್ ಇನ್ ರಿಲೇಶನ್ಶಿಪ್ ನ ನಿಷೇಧವನ್ನು
ಮಾಡಬೇಕಾಗಬಹುದು. ಇದು ಕಾಮಪ್ರಚೋದಕ
ನಡವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ
ಅಪರಾಧಗಳಿಗೆ ಮತ್ತಷ್ಟು ಕಾರಣವಾಗುತ್ತದೆ ಎಂದು
ತಿಳಿಸಿದೆ.

Leave A Reply

Your email address will not be published.