KSRTC ಬಸ್ ಚಾಲಕನ ಸಹಾಯ ಕೋರಿದ ವಿದ್ಯಾರ್ಥಿನಿಗೆ ಬಸ್ಸಿನಲ್ಲೇ ಲೈಂಗಿಕ ಕಿರುಕುಳ : ಕಿಟಕಿ ತೆರೆಯಲು ಹೇಳಿದಾಗ ಕಾಮುಕ ವರ್ತನೆ ತೋರಿದ ಪಾಪಿ!

ಮಹಿಳೆಯರು ಈ ಅತ್ಯಾಧುನಿಕ ಕಾಲದಲ್ಲಿ ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಕಷ್ಟಕರವಾಗಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಲೈಂಗಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ಇಂತಹ ಅನೇಕ ಪ್ರಸಂಗಗಳು ದಿನನಿತ್ಯ ನಡೆಯುತ್ತಲೇ ಇರುತ್ತದೆ. ಇಂಥದ್ದೇ ಒಂದು ಲೈಂಗಿಕ ಕಿರುಕುಳದ ಘಟನೆಯೊಂದನ್ನು ಬೆಂಗಳೂರು ವಿದ್ಯಾರ್ಥಿನಿ ಎದುರಿಸಿದ್ದಾಳೆ‌.

 

ವಿದ್ಯಾರ್ಥಿನಿ ಕಿಟಕಿ ಬಾಗಿಲು ತೆರೆಯಲು ಚಾಲಕನ ಸಹಾಯ ಕೋರಿದಾಗ ಈ ಘಟನೆ ನಡೆದಿದೆ. ಕಿಟಕಿ ತೆಗೆಯುವ ನೆಪದಲ್ಲಿ ಚಾಲಕ ಎಲ್ಲೆಲ್ಲೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿದ್ದು, ಚಾಲಕನ ವರ್ತನೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.

ಈ ಘಟನೆ ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಪತ್ತನಂತಿಟ್ಟ ಡಿಪೋದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್ ಡೀಲಕ್ಸ್ ಬಸ್ಸಿನಲ್ಲಿ ನಡೆದಿದೆ ಎನ್ನಲಾಗಿದೆ.

ಇದೀಗ ಚಾಲಕ ಶಾಜಹನ್ ವಿರುದ್ಧ ದೂರು ದಾಖಲಾಗಿದ್ದು, ವಿಜಿಲೆನ್ಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಕೃಷ್ಣಗಿರಿ ಸಮೀಪದಲ್ಲಿ ಶನಿವಾರ ಘಟನೆ ನಡೆಯಿತು ಎಂದು ಸಂತ್ರಸ್ತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.

Leave A Reply

Your email address will not be published.