ಉದ್ಘಾಟನೆಗೆ ಸಜ್ಜಾದ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ

ಈ ಗ್ಲಾಸ್ ಬ್ರಿಜ್ ಮೇಲೆ ನಡೆದು ಹೋಗುತ್ತಿದ್ದರೆ ಎದೆ ಬಡಿತ ನಮಗರಿವಿಲ್ಲದೆಯೇ ಧಮರುಗ ಬಾರಿಸಲಾರಂಬಿಸುತ್ತದೆ. ಕೆಲವರಂತೂ ಸ್ವಲ್ಪ ದೂರ ಹೋದ ಮೇಲೆ ಮುಂದಕ್ಕೆ ಹೋಗಲು ಭಯ ಪಡುತ್ತಾರೆ. ಹಿಂದಕ್ಕೆ ತಿರುಗಿ ಬರುವಂತಿಲ್ಲ. ಅಂತಹಾ ರುದ್ರ ರಮಣೀಯ ತಾಣವೊಂದು ಸಾಹಸಿಗಳನ್ನು ಕೈ ಬೀಸಿ ಕರೆಯುತ್ತಿದೆ. ಸಾಹಸಿ ಮನಸ್ಸುಗಳಿಗೆ ಇದೊಂದು ಮೆಚ್ಚಿನ ತಾಣವಾಗಿದೆ. ಚೀನಾಕ್ಕೆ ಭೇಟಿ ನೀಡಿದರೆ ಅಲ್ಲಿ ಚೀನಾದ ಮಹಾಗೋಡೆಯ ನಂತರ ಮಿಸ್‌ ಮಾಡದೆ ನೋಡಲೇ ಬೇಕಾದ ಮತ್ತೊಂದು ಸ್ಥಳವೆಂದರೆ ಝಾಂಗ್‌ಜಿಯಾಜಿ ಗ್ಲಾಸ್‌ ಬ್ರಿಡ್ಜ್. ಆದರೆ ಇದೀಗ ವಿಯೆಟ್ನಾಂ ನಲ್ಲಿ ಉದ್ಘಾಟನೆಯಾಗುತ್ತಿರುವ ಲಾಂಗ್  ಗ್ಲಾಸ್ ಬ್ರಿಜ್.

 

ಇಷ್ಟು ದಿನ ವಿಶ್ವದ ಅತೀ ಉದ್ದವಾದ ಗಾಜಿನ ಸೇತುವೆ ಎಂದು ಚೀನಾದ ಸೇತುವೆ ಪ್ರಸಿದ್ಧವಾಗಿತ್ತು. ಈಗ ಅದನ್ನು ಮೀರಿಸುವಂತಹ ಸೇತುವೆಯೊಂದು ನಿರ್ಮಾಣವಾಗಿದೆ.
ವಿಶ್ವದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗುವ ಗಾಜಿನ ಸೇತುವೆ ಸದ್ಯದಲ್ಲೇ ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೆರೆಯಲಿದೆ.

ಬ್ಯಾಚ್ ಲಾಂಗ್ ಹೆಸರಿನ ಈ ಸೇತುವೆಯು ವಿಯೆಟ್ನಾಂನ ಪುನರೇಕೀಕರಣ ದಿನದಂದು (ಏಪ್ರಿಲ್ 30) ಸಾರ್ವಜನಿಕರಿಗೆ ತೆರೆಯುತ್ತದೆ. ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂದು ಗುರುತಿಸಲು ಗಿನ್ನೆಸ್ ವಿಶ್ವ ದಾಖಲೆಗೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಚೀನಾದ ಹುನಾನ್ ಪ್ರಾಂತ್ಯದ ಜಾಂಗ್ಜಿಯಾಜಿ ಗ್ರಾಂಡ್ ಕ್ಯಾನ್ಯನ್ ಮೇಲಿನ 1,410.7 ಅಡಿ ಉದ್ದದ ಗಾಜಿನ ಸೇತುವೆಯ ಮೂಲಕ ಪ್ರಸ್ತುತ ಇರುವ ದಾಖಲೆಯಾಗಿದೆ. ಆದರೆ ಇದೀಗ ವಿಯೆಟ್ನಾಂನ ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ ಬರೋಬ್ಬರಿ 2,073.5 ಅಡಿ ಉದ್ದದ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

Leave A Reply

Your email address will not be published.