ಮದುವೆಯಲ್ಲಿ ವರ ವಧುವಾಗುವ- ವಧು ವರನಾಗುವ ವಿಚಿತ್ರ ಪದ್ಧತಿ ಇದು

ಮದುವೆ ನಿಶ್ಚಯವಾದೊಡನೆ ಮದುಮಗಳು ಧಾರೆ ಸೀರೆ ಅರಿಶಿಣ ಸೀರೆ ಎಂದು ಹಲವಾರು ಸಿರೆಗಳನ್ನು ಖರೀದಿಸಿ ಅಲಂಕಾರಗೊಳಿಸಿಕೊಳ್ಳುತ್ತಾರೆ. ಮದುಮಗ ಜುಬ್ಬಾ, ಸೂಟು ಕೋಟು ಎಂದು ಖರೀದಿ ಮಾಡುತ್ತಾನೆ ಆದರೆ ಇಲ್ಲೊಂದೆಡೆ ಉಲ್ಟಾ ಸಂಪ್ರದಾಯವಿದೆ.

 

ವಿಚಿತ್ರ ಸಂಪ್ರದಾಯದ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ ಇಲ್ಲಿ ಮದುಮಗ ಮದುವೆ ಹೆಣ್ಣಿನಂತಾಗುತ್ತಾನೆ.‌ ಇವರ ಆಚಾರಗಳಲ್ಲಿ ಮದುಮಗನನ್ನು ಮದುಮಗಳ ರೀತಿಯೂ, ಮದುಮಗಳನ್ನು ಮದುಮಗಳ ರೀತಿಯೂ ಸಿಂಗರಿಸಲಾಗುತ್ತದೆ. ನಂತರ ಗುರಪ್ಪ ಸ್ವಾಮಿಗೆ ಕರಕೆ ತೀರಿಸಲಾಗುತ್ತದೆ. ಅನಾದಿ ಕಾಲದಿಂದ ಬರುತ್ತಿರುವ ಈ ಸಂಪ್ರದಾಯವನ್ನು ಇಂದಿಗೂ ಮುಂದವರೆಸಲಾಗುತ್ತಿದೆ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕೋನಮಿಟ್ಲ ಮಂಡಲ್‌ ಗೊಟ್ಲಗಟ್ಟ ಗ್ರಾಮದಲ್ಲಿ ಅವರ ವಂಶ ಸಂಪ್ರದಾಯದ ಪ್ರಕಾರ ವರ ವಧುವಿನಂತೆ ಸಿಂಗಾರಗೊಳ್ಳಬೇಕು. ವಧುವಾದರೆ ವರನಂತೆ ಸಿಂಗಾರವಾಗಬೇಕು.ಫ್ಯಾಂಟು, ಶರ್ಟ್‌ಗೆ ಬದಲಾಗಿ ಸೀರೆ, ಚಾಕೆಟ್‌, ವಿಗ್‌ ಧರಿಸಿಕೊಂಡು ಹುಡುಗಿಯಂತೆ ಸಿಂಗಾರಗೊಳ್ಳಬೇಕು. ಥೇಟ್‌ ಮದುಮಗಳಂತೆ ಸಿಂಗಾರಗೊಂಡ ನಂತರ ಅವರ ಕುಲದೇವರಾದ ಗುರಪ್ಪ ಸ್ವಾಮಿಗೆ ಹರಕೆ ತೀರಿಸಬೇಕು.

Leave A Reply

Your email address will not be published.