ಇಂದಿನ ಷೇರು ಮಾರುಕಟ್ಟೆಯಲ್ಲಿ ತಲ್ಲಣದ ವಾತಾವರಣ; ಇಲ್ಲಿದೆ ಸಂಪೂರ್ಣ ಲಾಭ ನಷ್ಟದ ಮಾಹಿತಿ

ವಿಶ್ವ ಷೇರು ಮಾರುಕಟ್ಟೆಗಳಾದ್ಯಂತ ಮಂಗಳವಾರ ವ್ಯಾಪಾರ ವಹಿವಾಟು ತಣ್ಣಗಿತ್ತು. ಕೊನೆಯ ಗಂಟೆಯಲ್ಲಿ ಭಾರತೀಯ ಈಕ್ವಿಟಿ ಮಾನದಂಡಗಳು ಕುಸಿತ ಕಂಡಿವೆ.

 

ಹಣಕಾಸು, ಐಟಿ, ಎಫ್‌ಎಂಸಿಜಿ ಮತ್ತು ಆಟೋ ಷೇರುಗಳು ಕುಸಿತ ಕಂಡಿವೆ. ನಿಫ್ಟಿ 50 ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ 17,000 ಅಂಶಕ್ಕಿಂತ ಕೆಳಗಿಳಿದಿದೆ. 

HDFC ಲೈಫ್, HDFC, HDFC ಬ್ಯಾಂಕ್, SBI ಲೈಫ್, ಟಾಟಾ ಕನ್ಸೂಮರ್, ITC ಮತ್ತು Cipla ಅತಿ ಹೆಚ್ಚು ಕುಸಿತ ಕಂಡ ಷೇರುಗಳಾಗಿದ್ದು, ನಿಫ್ಟಿ 50ರಲ್ಲಿ 44 ಕೆಟ್ಟ ಅಂತ್ಯ ಕಂಡಿವೆ. ಅಪೊಲೊ ಹಾಸ್ಪಿಟಲ್ಸ್, ಕೋಲ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್ ಮತ್ತು ಒಎನ್‌ಜಿಸಿ ಮಾತ್ರ ಲಾಭ ಕಂಡು, ಶೇಕಡಾ 0.2 ರಿಂದ 5.3 ರಷ್ಟು ಏರಿಕೆಯಾಗಿದೆ.

ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಳ ಮತ್ತು ವಿದೇಶಿ ಬಂಡವಾಳದ ಹರಿವಿನ ಆತಂಕದಿಂದ ಹೂಡಿಕೆದಾರರು ಹೆಚ್ಚು ಆಸಕ್ತಿ ವಹಿಸದಿರುವುದು ಷೇರು ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.