ಸಿಡಿಲಿನ ಅಬ್ಬರಕ್ಕೆ ನೀವು ಕಂಗೆಟ್ಟಿ ಹೋಗಿದ್ದೀರೆ!? |ಇದರಿಂದ ಹೇಗೆ ರಕ್ಷಣೆ ಪಡೆದುಕೊಳ್ಳುವುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ

ಕಾದ ಇಳೆಗೆ ಮಳೆರಾಯ ತಂಪಾಗಿನ ಹನಿಗಳನ್ನು ನೀಡಿ ಮುದಗೊಳಿಸಿದರೂ,ಈ ಸಿಡಿಲಿನ ಅಬ್ಬರಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ.ಅತಿಯಾದ ಮಳೆಯಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿದ್ದು, ಅದೆಷ್ಟೋ ರೈತರಿಗೆ ನೋವು ತರಿಸಿದೆ.ಅದೆಷ್ಟೇ ಧೈರ್ಯವಂತನಾದರೂ ಸಿಡಿಲಿನ ಅಬ್ಬರಕ್ಕೆ ಒಮ್ಮೆ ಹೆದರಿ ನಿಲ್ಲೋದರಲ್ಲಿ ಸಂಶಯವೇ ಇಲ್ಲ.

ಹೌದು. ಅದೆಷ್ಟೋ ಜನರು ಈ ಅತಿಯಾದ ಮಳೆಯಿಂದಾಗಿ,ಸಿಡಿಲಿನಿಂದಾಗಿ ಪ್ರಾಣವನ್ನೇ ಬಿಟ್ಟಿದ್ದಾರೆ. ಆದ್ರೆ ಈ ಮಳೆ, ಸಿಡಿಲು, ಗಾಳಿಯೆಲ್ಲಾ ಭಗವಂತನ ಸೃಷ್ಟಿ.ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಹಾಗಾಗಿ ಬುದ್ಧಿ ಜೀವಿಗಳಾದ ನಾವು ಮಾಡಬಹುದಾದ ಕೆಲಸವೆಂದರೆ ಮುಂಜಾಗೃತ ಕ್ರಮ.ಈ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಕಂದಾಯ ಇಲಾಖೆ ಪ್ರಕರಟಣೆ ಹೊರಡಿಸಿದ್ದು, ಈ ಸಿಡಿಲಿನಿಂದ ಹೇಗೆ ರಕ್ಷಣೆ ಪಡೆದುಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡಿ.

  • ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ,ನಿಲ್ಲ ಬೇಡಿ.
  • ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
  • ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)
    *ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ.
  • ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ.ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.
  • ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .
  • ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
  • ತಂತಿಬೇಲಿ,ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ.
  • ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
  • ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
  • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ.
  • ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
  • ಕಂಪ್ಯೂಟರ್ ಗಳಿಂದ ದೂರ ಇರಿ
  • ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ,ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಈ ಮಹತ್ವದ ಮಾಹಿತಿಯನ್ನು ಎಲ್ಲರಿಗೂ ರವಾನಿಸುವ ಮೂಲಕ ತಮ್ಮ ಜೀವದ ಜೊತೆ ಇನ್ನೊಬ್ಬರ ಪ್ರಾಣವನ್ನು ಉಳಿಸಿ.
Leave A Reply

Your email address will not be published.