2nd PUC ವಿದ್ಯಾರ್ಥಿಗಳೇ ಗಮನಿಸಿ; ಈ ಬಾರಿ ಪರೀಕ್ಷೆಗೆ ಬಹುಆಯ್ಕೆಯ ಪ್ರಶ್ನೆಗಳೇ ಹೆಚ್ಚು : ವಿದ್ಯಾಥಿಗಳಿಗೆ ಸುಲಭ ಆಗುವಂತೆ ಪ್ರಶ್ನೆ ಪತ್ರಿಕೆ ರಚನೆ ;
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಪರೀಕ್ಷೆ ಏ. 22ರಿಂದ ಮೇ.18ರವರೆಗೆ ಪರೀಕ್ಷೆ ನಡೆಯಲಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಗೆ ನೀಡಿರುವ ಮಾಹಿತಿ ಸಿಹಿ ಸುದ್ದಿ ಆಗುವುದರಲ್ಲಿ ಎರಡು ಮಾತಿಲ್ಲ.
ಏಕೆಂದರೆ ಈ ವರ್ಷ ಪರೀಕ್ಷೆಯಲ್ಲಿ ವಿದ್ಯಾಥಿಗಳಿಗೆ ಸರಳ ಆಗುವಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗಿದೆ. ಒಂದು ಅಂಕ ಬಹುಆಯ್ಕೆಯ ಪ್ರಶ್ನೆಗಳು ಈ ಬಾರಿ ಹೆಚ್ಚಾಗಿ ನೀಡಲಾಗಿದೆ.
ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಶೈಕ್ಷಣಿಕ ದಿನಗಳು ಕಡಿಮೆ ಮಾಡಲಾಗಿದೆ. ಆದರೆ ಈ ಬಾರಿ ಪರೀಕ್ಷೆಯನ್ನು ಎಲ್ಲರೂ ಬರೆಯಬೇಕಿದೆ. ಹಾಗಾಗಿ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಸರಳ ಬದಲಾವಣೆ ಮಾಡಲಾಗಿದೆ.
ಹೀಗಿರಲಿದೆ ಪ್ರಶ್ನೆ ಪತ್ರಿಕೆ!: ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರತಿ ಪತ್ರಿಕೆಯನ್ನು ಸುಲಭ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 1 ಅಂಕದ ಪ್ರಶ್ನೆಗಳನ್ನು 10ಕ್ಕೆ ಹೆಚ್ಚಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳನ್ನು ಹೆಚ್ಚಿಸಿದ್ದು ಮತ್ತು ಪ್ರಶ್ನೆಗಳಿಗೆ ಬಹು ಆಯ್ಕೆ ನೀಡಿರುವುದು ಇನ್ನಷ್ಟು ಸರಳವಾಗಿದೆ.
ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿದೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳಿಗೆ ಉತ್ತರಿಸಬೇಕಿದೆ. ಈ ಮೊದಲು ಕಲಾ ಹಾಗೂ ವಾಣಿಜ್ಯ ವಿಭಾಗದ ಪತ್ರಿಕೆಗಳಿಗೆ 140 ಪ್ರಶ್ನೆಗಳಿರುತ್ತಿದ್ದವು, ಈ ಬಾರಿ 167 ಕ್ಕೆ ಹೆಚ್ಚಿಸಲಾಗಿದೆ. 100 ಅಂಕಗಳಿಗಷ್ಟೇ ಉತ್ತರಿಸಬೇಕಿದೆ.
ಬಹುಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಕಡಿಮೆ ಓದಿದರೂ ಅಂದರೆ ಶೇಕಡಾ 50-60 ರಷ್ಟು ಪಠ್ಯ ಓದಿದರೂ ಶೇ. 75 ರಷ್ಟು ಅಂಕಗಳ ಸುಲಭವಾಗಿ ಪಡೆಯಬಹುದು. ಈ ಮೊದಲು ಡಿಸ್ಟಿಂಕ್ಷನ್ಷ್ಟು ಅಂಕ ಪಡೆಯಲು ಕನಿಷ್ಠ ಶೇ. 80 ರಷ್ಟು ಪಠ್ಯ ಓದಬೇಕಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತಿದ್ದು, ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗುವುದು ಸುಲಭವಾಗಿದೆ. ಪ್ರಶ್ನೆ ಪತ್ರಿಕೆಯ ಈ ಹೊಸ ನಿಯಮ ಈ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಇರಲಿದೆ.