ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ದೈತ್ಯ ಧೂಮಕೇತು !! | 80 ಮೈಲಿಗಿಂತ ಹೆಚ್ಚು ಸುತ್ತಳತೆ ಹೊಂದಿರುವ ಈ ಹಿಮಧೂಮಕೇತುವಿನ ಕುರಿತು ನಾಸಾದಿಂದ ಮಾಹಿತಿ ಬಹಿರಂಗ
ಬಾಹ್ಯಾಕಾಶದಲ್ಲಿರುವ ರಹಸ್ಯಗಳು ಒಂದೆರೆಡಲ್ಲ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತದೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿದ್ದು, ಈಗಲೂ ಇಂತಹ ಅಚ್ಚರಿಗಳು ಮಾನವನ ಬಾಹ್ಯಾಕಾಶ ಜ್ಞಾನ ವೃದ್ಧಿಯಲ್ಲಿ ನೆರವಾಗುತ್ತಿವೆ. ಅಂತೆಯೇ ಇದೀಗ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಖಗೋಳಶಾಸ್ತ್ರಜ್ಞರು ಇದುವರೆಗೆ ನೋಡಿದ ಅತಿದೊಡ್ಡ ಹಿಮಧೂಮಕೇತುವಿನ ಕುರಿತು ಮಾಹಿತಿ ಬಹಿರಂಗಪಡಿಸಿದೆ.
ಈ ವಿಶೇಷ ಧೂಮಕೇತು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವುದು ಕಂಡುಬಂದಿದೆ. ಇದರ ದ್ರವ್ಯರಾಶಿ (ಬಾಹ್ಯಾಕಾಶದಲ್ಲಿನ ತೂಕ) 500 ಟ್ರಿಲಿಯನ್ ಟನ್. ಇದು ಸಾಮಾನ್ಯವಾಗಿ ಕಂಡುಬರುವ ಕಾಮೆಟ್ ದ್ರವ್ಯರಾಶಿಗಿಂತ ಸುಮಾರು ಒಂದು ಮಿಲಿಯನ್ ಪಟ್ಟು ಹೆಚ್ಚಾಗಿದೆ. ತುಂಬಾ ವಿಶಾಲಕಾಯದ ಧೂಮಕೇತು ಇದಾಗಿದ್ದು, ಈ ಧೂಮಕೇತುವಿನ ಅಂದಾಜು ವ್ಯಾಸವು 80 ಮೈಲುಗಳಿಗಿಂತ ಹೆಚ್ಚು ಇರಬಹುದು ಎಂದು ನಾಸಾ ಬಹಿರಂಗಪಡಿಸಿದೆ. ಇದರರ್ಥ ಇದು US ರಾಜ್ಯವಾದ ರೋಡ್ ಐಲೆಂಡ್‌ಗಿಂತ ದೊಡ್ಡದಾಗಿದೆ. ಇದುವರೆಗೆ ತಿಳಿದಿರುವ ಎಲ್ಲಾ ಧೂಮಕೇತುಗಳಿಗಿಂತ ಇದು ಸುಮಾರು 50 ಪಟ್ಟು ದೊಡ್ಡದಾಗಿದೆ ಎಂದು ನಾಸಾ ಹೇಳಿದೆ.
C/2014 UN271 ‘Bernardinelli-Bernstein’ ಹೆಸರಿನ ಈ ಧೂಮಕೇತು 22,000 mph (35,200 kmph) ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಎಂದು US ಮೂಲದ ಬಾಹ್ಯಾಕಾಶ ಸಂಸ್ಥೆ NASA ಬಹಿರಂಗಪಡಿಸಿದೆ. ಆದರೆ, ಭೂಮಿಯ ಸಮೀಪಕ್ಕೆ ಬರದ ಕಾರಣ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು ಒಂದು ಚಿಕ್ಕ ಟಿಪ್ಪಣಿ ಬರೆದುಕೊಂಡಿರುವ ನಾಸಾ, ‘ಸೂರ್ಯನಿಂದ 1 ಬಿಲಿಯನ್ ಮೈಲಿ ದೂರದಲ್ಲಿ ಬರುವವರೆಗೆ ಇದು ಮತ್ತೆ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ’ ಎಂದು ಹೇಳಿದೆ. ಇದು ಶನಿಯಿಂದ ಸ್ವಲ್ಪ ದೂರದಲ್ಲಿ ಇರುವಾಗ ಕೊನೆಗೊಳ್ಳಬಹುದು. ಯಾವುದೇ ಕಾರಣಕ್ಕೂ ಇದು 2031 ರವರೆಗೆ ಉಳಿಯುವುದಿಲ್ಲ ಎಂದು ನಾಸಾ ಹೇಳಿದೆ.
“ಸೌರವ್ಯೂಹದ ದೂರದ ಭಾಗಗಳಲ್ಲಿ ಅಪರೂಪವಾಗಿ ಕಂಡುಬರುವ ಸಾವಿರಾರು ಧೂಮಕೇತುಗಳಿಗೆ ಈ ಧೂಮಕೇತು ಅಕ್ಷರಶಃ ಮಂಜುಗಡ್ಡೆಯ ತಲೆಯಾಗಿದೆ” ಎಂದು ನಾಸಾ ಹೇಳಿದೆ ಎಂದು ಡೇವಿಡ್ ಜ್ವಿಟ್ ಹೇಳಿದ್ದಾರೆ. ಡೇವಿಡ್ ಜ್ವಿಟ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (UCLA) ನಲ್ಲಿ ಗ್ರಹಗಳ ವಿಜ್ಞಾನ ಮತ್ತು ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಅವರು ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್‌ನಲ್ಲಿ ಹೊಸ ಅಧ್ಯಯನದ ಸಹ-ಲೇಖಕಕರೂ ಕೂಡ ಆಗಿದ್ದಾರೆ.