ಬೆಳ್ತಂಗಡಿ : ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿ ಕಳ್ಳತನ ; ಚಿನ್ನಾಭರಣ ನಗದು ದೋಚಿ ಪರಾರಿಯಾದ ಕಳ್ಳರು

Share the Article

ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆ ಎಂಬಲ್ಲಿ ಭಾನುವಾರ ರಾತ್ರಿ ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಕಳ್ಳರು ಕಪಾಟನ್ನು ಒಡೆದು ಎರಡು ಪವನ್ ಚಿನ್ನ ಮತ್ತು ಸುಮಾರು 16,000 ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆ ನಿವಾಸಿ ಇಕ್ಬಾಲ್ ಎಂಬವರಿಗೆ ಸೇರಿದ ಮನೆಯಲ್ಲಿ ತಂಗಿ ಝರಿನಾ ಮತ್ತು ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದಾರೆ. ಗಂಡ ಇಸ್ಮಾಯಿಲ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಝರಿನಾ ಮತ್ತು ಮಕ್ಕಳು ಮೂರು ದಿನದ ಹಿಂದೆ ತವರು ಮನೆ ಬದ್ಯಾರಿಗೆ ಹೋಗಿದ್ದು ಅನಂತರ ಈ ಘಟನೆ ನಡೆದಿದೆ. ರಾತ್ರಿ ಹಿಂಬಾಗಿಲು ಮುರಿದು ಒಳನುಗ್ಗಿದ
ಮನೆಯಲ್ಲಿದ್ದ ಬಟ್ಟೆ ಹಾಗೂ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಇಕ್ಬಾಲ್ ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕೃತ್ಯವನ್ನು ಯಾರೋ ಸ್ಥಳೀಯರು ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಠಾಣೆಯ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ತನಿಖೆ ನಡೆಸುತ್ತಿದೆ.

Leave A Reply

Your email address will not be published.