ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಸುಳ್ಯದ ದಂಪತಿ!! ಪುತ್ರಿಯ ವಿವಾಹವಾಗಿ ಒಂದು ವರ್ಷದಲ್ಲೇ ಸಾವಿನ ನಿರ್ಧಾರಕ್ಕೆ ಕಾರಣವೇನು!??

ಸುಳ್ಯ : ಮೂರು ವರ್ಷದಿಂದ ಮೈಸೂರಿನಲ್ಲಿ ನೆಲೆಸಿದ್ದ ಸುಳ್ಯದ ಕುಕ್ಕಾಜೆಕಾನದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡವರನ್ನು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಎಂದು ಗುರುತಿಸಲಾಗಿದೆ.

ಸುಳ್ಯ ಕುಕ್ಕಾಜೆಕಾನದ ಮಾಧವ ನಾಯ್ಕ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನಡೆಸಿದ್ದು, ಕಳೆದ ವರ್ಷ ಪುತ್ರಿಯ ಮದುವೆ ಕೂಡ ಮಾಡಿಸಿದ್ದು, ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಗಳಿಗೆ ಮದುವೆ ಮಾಡಿಸಿ ಒಂದು ವರ್ಷದಲ್ಲೇ ದಂಪತಿಗಳು ಈ ರೀತಿಯ ದುಡುಕಿನ ನಿರ್ಧಾರ ಮಾಡಿರುವುದಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ.

ಮೃತದೇಹಗಳನ್ನು ಏ.17 ರಂದು ರಾತ್ರಿ ಸುಳ್ಯ ಕುಕ್ಕಾಜೆಕಾನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಹಜರು ನಡೆಸಲಾಗಿದೆ.

Leave A Reply

Your email address will not be published.