ಪತ್ನಿಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಸ್ನೇಹಿತರಿಗೆ ಕಳಿಸಿದ ಪತಿ ಮಹಾಶಯ!! ಚಿತ್ರಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತ ಮಹಿಳೆಯಿಂದ ಪೊಲೀಸರಿಗೆ ದೂರು

ತನ್ನ ಪತ್ನಿಯ ನಗ್ನ ಫೋಟೋ ತೆಗೆದು, ಅದನ್ನು ಸ್ನೇಹಿತರಿಗೆ ಕಳುಹಿಸಿದ ಪಾಪಿ ಪತಿಯೊಬ್ಬನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಹಾಕಿ,
ಅದನ್ನು ಪತ್ನಿಗೆ ಕುಡಿಸಿದ್ದಾನೆ. ಅಮಲು ಪದಾರ್ಥ ಹಾಕಿರುವ ಕುರಿತು ಪತ್ನಿಗೆ ತಿಳಿದಿರಲಿಲ್ಲ. ಜ್ಯೂಸ್ ಕುಡಿದ ನಂತರ ಹೆಂಡತಿ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯ ಬಟ್ಟೆ ಎಲ್ಲಾ ಕಳಚಿ, ನಗ್ನ ಚಿತ್ರ ಸೆರೆಹಿಡಿದು ಅದನ್ನು ಸ್ನೇಹಿತರಿಗೆ ಕಳುಹಿಸಿದ್ದಾನೆ.

ಈ ಕುರಿತು ಕನಕಪುರ ರಸ್ತೆಯ ನಿವಾಸಿ 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪತಿ ವೆಂಕಟಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ನೋನ್ಯವಾಗಿದ್ದ ಪತಿ, ನಂತರ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಈತ ಇಷ್ಟಕ್ಕೇ ನಿಲ್ಲಿಸದೇ, ಸ್ನೇಹಿತನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೂಡ ಮಾನಸಿಕವಾಗಿ ಹೆಂಡತಿಗೆ ಪೀಡಿಸುತ್ತಿದ್ದನಂತೆ. ಈ ನಡುವೆ ದೂರುದಾರ ಮಹಿಳೆಯ ತಂದೆ ಮೃತಪಟ್ಟಿದ್ದರು. ತಂದೆಗೆ ಬರುವ ಪಿಂಚಣಿ ಹಣ ಕೊಡುವಂತೆ ಕೂಡ ಹಿಂಸೆ ಕೊಡುತ್ತಿದ್ದ. ಹಣ ತರಲು ನಿರಾಕರಿಸಿದಾಗ ನಗ್ನ ಚಿತ್ರವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.