ಕಂದಾಯ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿ|ಇನ್ಮುಂದೆ ಆನ್ಲೈನ್ ನಲ್ಲಿಯೇ ಸಿಗಲಿದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು
ಬೆಂಗಳೂರು: ಸರ್ಕಾರ ಜನತೆಗೆ ಎಲ್ಲಾ ಯೋಜನೆಗಳು ಸುಲಭವಾಗಿ ಕೈಗೆಟುಕುವಂತೆ ಆಗಲು ಹೊಸ ಮಾರ್ಗಗಳನ್ನು ರೂಪಿಸುತ್ತಿದೆ. ಒಂದು ಕಾಲ್ ಕೊಡುವ ಮೂಲಕ ಪಿಂಚಣಿ ಪ್ರಮಾಣ ಪತ್ರವು ಮನೆಗೆ ಸೇರುವಂತಹ ಯೋಜನೆಯನ್ನು ಹೊರಡಿಸಿದೆ. ಅಂತೆಯೇ ಇದೀಗ ರೈತರಿಗೆ ಕಂದಾಯ ಇಲಾಖೆಯು ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳನ್ನು ಇನ್ನೂ ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.
ಯಾವುದೇ ಒಂದು ದಾಖಲೆಯನ್ನು ಪಡೆಯಬೇಕಾದರೆ ರೈತರು ಕಚೇರಿಗಳಿಗೆ ಅಲೆಯಬೇಕಾಗಿತ್ತು. ಇದು ಜನರಿಗೆ ತುಂಬಾ ಕಷ್ಟಕರವಾಗಿತ್ತು.ಇನ್ಮುಂದೆ ಇದಕ್ಕೆಲ್ಲ ಬ್ರೇಕ್ ಎಂಬಂತೆ ಕೇಂದ್ರ ಸರ್ಕಾರವು ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.ಹೌದು.. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಇನ್ಮುಂದೆ ಆನ್ ಲೈನ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.
ಇದಕ್ಕಾಗಿ ರಾಜ್ಯದ ರೈತರು http://103.138.196.154/service19/Report/ApplicationDetails ಈ ಲಿಂಕ್ ನಲ್ಲಿ ತಮಗೆ ಬೇಕಾದಂತ ದಾಖಲೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಅಲ್ಲದೇ ನಿಮ್ಮ ಅರ್ಜಿಯ ಸ್ಥಿತಿಗತಿ, ಅರ್ಜಿಗಳನ್ನು ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.ಜಮೀನಿನ ನಕ್ಷೆ ಬೇಕಾದರೆ ಸರ್ವೆ ಸಿಬ್ಬಂದಿ ಮಾಪನ ಕಾರ್ಯ ಮುಗಿಸಿ, ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು.