ಫೇಸ್ಬುಕ್ ಗೆಳತಿಯ ಸೆಕ್ಸಿ ಮೈಮಾಟಕ್ಕೆ ಮನಸೋತ ಶಿರಸಿ ಯುವಕ; ಆದರೆ ಮಂದಿತ್ತು ಮಾರಿಹಬ್ಬ; ಏನಂತೀರಾ? ಇಲ್ಲಿದೆ ಕಂಪ್ಲೀಟ್ ವಿವರ

ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಕೂಡಾ ಇರುತ್ತಾರೆ ಎನ್ನುವ ಮಾತು ಸುಳ್ಳಲ್ಲ. ವೀಡಿಯೋ ಕಾಲ್ ಮೂಲಕ ಯುವತಿ ಜೊತೆ ಸರಸ ಸಲ್ಲಾಪ ಮಾಡುವುದು ಅನಂತರ ಬ್ಲಾಕ್ ಮೇಲ್ ಮಾಡುವುದು ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಮಹಾಶಯ ತಾನು ಕಷ್ಟಪಟ್ಟು ಬೆಳೆಸಿದ ಅಡಿಕೆ ವ್ಯಾಪಾರದಿಂದ ಬಂದ ದುಡ್ಡನ್ನು ಮಾಯಾಂಗನೆಯ ಮೈಮಾಟಕ್ಕೆ ಮನಸೋತು ದುಡ್ಡು ಕಳೆದುಕೊಂಡು ಮೋಸ ಹೋದೆ ಎಂದು ಪೆಚ್ಚು ಮೋರೆ ಹಾಕಿದ್ದಾನೆ.

 

ಘಟನೆ ವಿವರ : ಈ ಘಟನೆ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡದಿದ್ದು, ಅಡಿಕೆ ವ್ಯಾಪಾರ ಮಾಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಯುವತಿಯೋರ್ವಳು ಫೇಸ್‌ಬುಕ್‌ನಲ್ಲಿ ಶಿರಸಿಯ ಯುವಕನಿಗೆ ಪರಿಚಯವಾಗಿದ್ದಾಳೆ, ನಂತರ ದಿನನಿತ್ಯ ಇಬ್ಬರು ಚಾಟಿಂಗ್ ಮಾಡಿದ್ದಾರೆ. ಈ ಯುವಕನಿಗೆ 35 ವರ್ಷ ವಯಸ್ಸಾಗಿದ್ದು, ಈವರೆಗೂ ಮದುವೆಯಾಗಿಲ್ಲ. ಈ ಹಿನ್ನೆಲೆ ಫೇಸ್‌ಬುಕ್‌ನಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಯುವತಿಯ ಜೊತೆ ಸಲಿಗೆಯಿಂದಲೇ ಮಾತನಾಡುತ್ತಿದ್ದ. ಆಗಾಗ ಇಬ್ಬರ ಫೋಟೋಗಳು ಶೇರ್ ಮಾಡುತ್ತಾ ಇದ್ದವು. ಕಳೆದ ಗುರುವಾರ ಇಬ್ಬರು ಸೇರಿ ವಿಡಿಯೋ ಕಾಲ್ ಮಾಡಿ ಅಶ್ಲೀಲ ರೀತಿ ವೀಡಿಯೋ ವ್ಯವಹರಿಸಿದ್ದಾರೆ. ಆದರೇ ಆ ಹುಡುಗಿ ಆತನ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದು, ಮಾರನೇ ದಿನ ಹುಡುಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

ನನಗೆ ತುರ್ತಾಗಿ 10 ಸಾವಿರ ಬೇಕು ಎಂದು ಕೇಳಿದಕ್ಕೆ ಯುವಕ ಅಡಿಕೆ ಮಾರಿದ್ದ ಹಣದಲ್ಲಿ ಯುವತಿಗೆ ಗೂಗಲ್ ಪೇ ಮೂಲಕ ಹಣ ರವಾನಿಸಿದ್ದಾನೆ. ಇದನ್ನೇ ರೂಢಿ ಮಾಡಿಕೊಂಡ ಯುವತಿ ಪದೇ ಪದೇ ಯುವಕನ ಬಳಿ ಹಣಕ್ಕೆ ಬೇಡಿಕೆ ಇಡುತ್ತಾ ಬಂದಿದ್ದಾಳೆ. ಇದಕ್ಕೆ ಬೇಸತ್ತ ಯುವಕ ಇನ್ನೂ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಯುವಕ ಯುವತಿಯ ಜೊತೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದ ವಿಡಿಯೋ ರೆಕಾರ್ಡ್‌ರನ್ನು ಯುವಕನಿಗೆ ಕಳಿಸಿ ನೀನು ಹಣ ನೀಡದಿದ್ದರೇ ಇದನ್ನ ವೈರಲ್ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾಳೆ. ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೆದರಿಸಿದ್ದಾಳೆ.

ಇದಕ್ಕೆ ಹೆದರಿದ ಯುವಕ 90 ಸಾವಿರ ಕಳೆದುಕೊಂಡಿದ್ದಾನೆ. ಈ ವಿಷಯ ಮನೆಮಂದಿಗೆ ಗೊತ್ತಿರಲಿಲ್ಲ. ಆದರೆ ಒಂದು ದಿನ ಮನೆ ಮಂದಿ ಅಡಿಕೆ ಮಾರಿದ್ದ ಹಣ ಎಲ್ಲಿ ಎಂದು ಕೇಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.

Leave A Reply

Your email address will not be published.