ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ -2 | ನಾಲ್ಕೇ ದಿನದಲ್ಲಿ 550 ಕೋಟಿ ಗಳಿಕೆಯ ಮೂಲಕ ಮತ್ತೊಮ್ಮೆ ಸ್ಟಾರ್ ನಟನಾಗಿ ಹೊರಹೊಮ್ಮಿದ ಯಶ್

Share the Article

ಬಹುನಿರೀಕ್ಷಿತ ಕೆಜಿಎಫ್-2 ಚಿತ್ರ ನಿರೀಕ್ಷೆಯಂತೆಯೇ ಬಾಕ್ಸಾಫೀಸ್ ಕೊಳ್ಳೆಹೊಡೆದಿದೆ. ಬಿಡುಗಡೆಯಾದ ಕೇವಲ ನಾಲ್ಕೇ ದಿನದಲ್ಲಿ 550 ಕೋಟಿ ರೂ. ಗಳಿಕೆ ಮಾಡುವ ಮೂಲಕ ಯಶ್ ಮತ್ತೊಮ್ಮೆ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ.

ಆರ್‌ಆರ್‌ಆರ್ ದಾಖಲೆಯನ್ನು ಮುರಿದಿರುವ ಕೆಜಿಎಫ್ 2 ಇನ್ನು ಮೂರ್ನಾಲ್ಕು ದಿನದಲ್ಲಿ ಸಾವಿರ ಕೋಟಿ ರೂ. ಕ್ಲಬ್ ಗೆ ಸೇರಲಿದೆ ಎನ್ನಲಾಗಿದೆ. ಏಪ್ರಿಲ್ 15-17ರಂದು ದಾಖಲೆಯ ಗಳಿಕೆ ಕಂಡಿದೆ. ನಾಲ್ಕನೇ ದಿನದಲ್ಲೇ 132 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ ಐದಾರು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ -2 ಹವಾ ಭಾರಿ ಜೋರಾಗೇ ಮುಂದುವರಿದಿದೆ.

ಬಿಡುಗಡೆಯಾದ ಎರಡೇ ದಿನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ವಿಶ್ವದ 10 ಸಿನಿಮಾಗಳ ಪೈಕಿ ಕೆಜಿಎಫ್ – 2 ಕೂಡ ಸೇರಿದೆ ಎಂದು ಸಿನಿಮಾ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲ ಟ್ವಿಟ್ ಮಾಡಿದ್ದಾರೆ. ಈ ಬಗ್ಗೆ ಅಮೆರಿಕ ಮಾಧ್ಯಮಗಳು ಕೂಡ ವರದಿ ಮಾಡಿವೆ ಎಂದು ಅವರು ಬರೆದುಕೊಂಡಿದ್ದಾರೆ.

ಬಿಡುಗಡೆಯಾದ ಮೊದಲ ದಿನವೇ 165.37 ಕೋಟಿ ರೂ. 2ನೇ ದಿನ 139.25, 3ನೇ ದಿನ 115.08 ಹಾಗ ನಾಲ್ಕನೇ ದಿನ 132.13 ಕೋಟಿ ರೂ. ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.