ಇನ್ನು ಮುಂದೆ ಬೈಕ್ ಹಿಂಬದಿ ಸವಾರಿ ಮಾಡಿದವರಿಗೆ ಬೀಳುತ್ತೆ ಲಾಠಿ ಏಟು, ಜೊತೆಗೆ ದಂಡ! ಯಾಕೆ ? ಎಲ್ಲಿ ಎಂದು ಗೊತ್ತಾ ಈ ಟಫ್ ರೂಲ್ಸ್…!

ಕೊರೋನಾ ಸಮಯದಲ್ಲಿ ಇಡೀ ದೇಶ ಲಾಕ್ ಡೌನ್ ಆಗಿತ್ತು. ಆ ವೇಳೆ ರೂಲ್ಸ್ ಮೀರಿ ಬೈಕ್ ನಿಂದ ಮನೆಯಿಂದ ಹೊರಗೆ ಬಂದಾಗ ಪೊಲೀಸರು ಯಾವ ರೀತಿ ಪಾಠ ಕಲಿಸಿದ್ದರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿದೆ.

ಆದರೆ ಇದೀಗ ಈ ಊರಿನಲ್ಲಿ ಬೈಕ್ ಸವಾರರ ಮೇಲೆ ಮತ್ತೊಮ್ಮೆ ಇದೀಗ ನಿರ್ಬಂಧ ಹೇರಲಾಗಿದೆ. ಬೈಕ್‌ನಲ್ಲಿ ಒಬ್ಬರೇ ಪ್ರಯಾಣ ಮಾಡಬೇಕು, ಬೈಕ್ ಹಿಂಬದಿ ಮತ್ತೊಬ್ಬರು ಕುಳಿತು ಪ್ರಯಾಣಿಸಿದರೆ ಬಿಸಿ ಬಿಸಿ ಲಾಠಿ ಏಟು ಜೊತೆಗೆ ದಂಡ ಬೀಳುವುದು ಖಂಡಿತ. ಈ ಟಫ್ ರೂಲ್ಸ್ ಜಾರಿ ಮಾಡಲು ಕೊರೋನಾ ಏನಾದ್ರೂ ಜಾಸ್ತಿಯಾಯ್ತಾ ಅಂತ ಆಲೋಚನೆ ಮಾಡ್ತಾ ಇದ್ದೀರಾ ? ಹಾಗಾದರೆ ಇದನ್ನೊಮ್ಮೆ ಓದಿ.


Ad Widget

Ad Widget

Ad Widget

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ. ಏಪ್ರಿಲ್ 20ರ ಸಂಜೆ 6 ಗಂಟೆವರೆಗೆ ವಿವಿಧ ರೀತಿಯ ನಿರ್ಬಂಧ ಹೇರಲಾಗಿದೆ. ವಾಹನ ಸವಾರರಿಗೆ ಹಲವು ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ವಿಶೇಷವಾಗಿ ಬೈಕ್‌ನಲ್ಲಿ ಒಬ್ಬರೇ ಪ್ರಯಾಣ ಮಾಡಬೇಕು ಎಂಬ ರೂಲ್ಸ್ ತರಲಾಗಿದೆ. ಹಿಂಬದಿ ಬೈಕ್ ಸವಾರರಿಗೆ ನಿರ್ಬಂಧ ಹೇರಲಾಗಿದ್ದು, ಬೈಕ್ ಹಿಂಬದಿ ಕುಳಿತು ಪ್ರಯಾಣಿಸುವವರಿಗೆ ಲಾಠಿ ಏಟಿನ ಜೊತೆಗೆ, ದಂಡ ವಿಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಶುಕ್ರವಾರ ನಡೆದ ಆರ್ ಎಸ್ ಎಸ್ ದಾಳಿಯಲ್ಲಿ ಪಿಎಫ್ ಐ ಸ್ಥಳೀಯ ಮುಖಂಡ, ಎಲಪ್ಪುಳ್ಳಿ ಸಮೀಪದ ಕುಥಿಯಾಥೋಡ್ ನ ಸುಬೈರ್(44) ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಎರಡು ರಾಜಕೀಯ ಮುಖಂಡರ ಕೊಲೆಗಳು ನಡೆದಿರುವುದರಿಂದ ಪಾಲಕ್ಕಾಡ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಶನಿವಾರ ನಡೆದ ಕೊಲೆಯಲ್ಲಿ ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿ ಹಂತಕರು ಹತ್ಯೆಯಲ್ಲಿ ಭಾಗಿಯಾಗಿದ್ದರು. ಅದಕ್ಕಿಂತ 24 ಗಂಟೆಗಳ ಮೊದಲು ಎಸ್‌ಡಿಪಿಐ ಕಾರ್ಯಕರ್ತ ಸುಬೈರ್ ಅವರನ್ನು ಎರಡು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಗುಂಪೊಂದು ಕಡಿದು ಕೊಂದಿತ್ತು. ಹೀಗಾಗಿ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: