ದೈವ ಮುಕ್ಕಾಲ್ದಿ ಪೂವಪ್ಪ ಶೆಟ್ಟಿ ಮತ್ತು ಯುವ ಬರಹಗಾರ ನೀತು ಬೆದ್ರಗೆ ಉಳ್ಳಾಲ್ದ ಕೋಟೆ ಕರಿಂಜೆ ದೈವಸ್ಥಾನದಲ್ಲಿ ಸನ್ಮಾನ..

Share the Article

ಮೂಡಬಿದ್ರೆ : ಶ್ರೀ ದೈವ ಕುಮಾರ,ಕೊಡಮಂದಾಯ,ಬ್ರಹ್ಮಬೈದರ್ಕಲ ಮಾಯಂದಾಲೆ ದೈವಸ್ಥಾನ ಶ್ರೀ ಕ್ಷೇತ್ರ ಉಳ್ಳಾಲ್ದ ಕೋಟೆ ಕರಿಂಜೆಯಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಕ್ಷೇತ್ರದಲ್ಲಿ 47ವರ್ಷ ಸೇವೆ ಸಲ್ಲಿಸಿದ ಕೊಡಮಂದಾಯ ಮುಕ್ಕಾಲ್ದಿ ಪೂವಪ್ಪ ಶೆಟ್ಟಿ, ಜೀಟಿಗೆಯಲ್ಲಿ ಸೇವೆ ಸಲ್ಲಿಸಿದ ರಾಮಣ್ಣ ಕುಂದರ್ ಹಾಗೂ ತುಳುನಾಡಿನ ಯುವ ಬರಹಗಾರ ನೀತು ಬೆದ್ರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರಿಂಜೆ ಗುತ್ತು ಕೃಷ್ಣರಾಜ್ ಹೆಗ್ಡೆ, ವಕೀಲರಾದಂತಹ ಬಾಹುಬಲಿ ಪ್ರಸಾದ್, ಧನಲಕ್ಷ್ಮೀ ಕ್ಯಾಶೂನ ಮಾಲಕರಾದ ಶ್ರೀಪತಿ ಭಟ್ ಮತ್ತಿತ್ತರರು ಉಪಸ್ಥಿತರಿದ್ದರು.

Leave A Reply