ನುಗ್ಗಿಕೇರಿ ದೇವಸ್ಥಾನದ ಬಳಿ ಮುಸ್ಲಿಂ ವರ್ತಕನ ಕಲ್ಲಂಗಡಿ ಅಂಗಡಿಗೆ ನುಗ್ಗಿ ಹೊಡೆದ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಜಾಮೀನು | ಕಲ್ಲಂಗಡಿ ಹೊಡೆದು ಸ್ವಾಗತ ಕೋರಿ ಸಂಭ್ರಮಿಸಿದ ಕಾರ್ಯಕರ್ತರು
ಧಾರವಾಡ: ನುಗ್ಗಿಕೇರಿ ಹನುಮಂತ ದೇವಸ್ಥಾನದ ಬಳಿ ಮುಸ್ಲಿಂ ವರ್ತಕನ ಅಂಗಡಿ ಧ್ವಂಸಗೊಳಿಸಿ ಬಂಧನಕ್ಕೊಳಗಾಗಿದ್ದ ನಾಲ್ವರು ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಶನಿವಾರ ಜಾಮೀನು ಸಿಕ್ಕಿದೆ.
ಬಂಧನದಿಂದ ಹೊರಗೆ ಬಂದ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಕುಂಬಳ ಕಾಯಿ ಹೊಡೆಯುವಂತೆ, ಕಲ್ಲಂಗಡಿ ಹಣ್ಣು ಹೊಡೆಯುವ ಮೂಲಕ ಅವರಿಗೆ ಸ್ವಾಗತ ಕೋರಲಾಯಿತು. ಆ ನಾಲ್ಕು ಜನರಿಗೆ, ಕಲ್ಲಂಗಡಿ ಹಣ್ಣಿನ ಮೇಲೆ ಕರ್ಪೂರ ಹಚ್ಚಿ, ಆರತಿ ಬೆಳಗಿ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಭಾರತ್ ಮಾತಾಕಿ ಮತ್ತು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸಿದರು.
ನುಗ್ಗಿಕೇರೆ ಆಂಜನೇಯನ ದೇವಸ್ಥಾನದ ಬಳಿ ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಕ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.