ರಾಜ್ಯಾದ್ಯಂತ ಏಪ್ರಿಲ್ 18 ರಿಂದ ಏಪ್ರಿಲ್ 22 ರವರೆಗೆ ಆರೋಗ್ಯ ಮೇಳ !! | ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ, ಮಾರ್ಗದರ್ಶನ ಲಭ್ಯ
ರಾಜ್ಯಾದ್ಯಂತ ಏಪ್ರಿಲ್ 18 ರಿಂದ ಏಪ್ರಿಲ್ 22 ರವರೆಗೆ ಆರೋಗ್ಯ ಮೇಳ ನಡೆಯಲಿದ್ದು, ಆಯುಷ್ಮಾನ್ ಭಾರತ ಯೋಜನೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಈ ಮೇಳ ನಡೆಸಲು ನಿರ್ಧರಿಸಿದೆ.
ಮೇಳದಲ್ಲಿ ಸಾರ್ವಜನಿಕರು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ, ಚಿಕಿತ್ಸೆ, ಮಾರ್ಗದರ್ಶನವನ್ನು ಉಚಿತವಾಗಿ ಪಡೆಯಬಹುದು. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ರಾಜ್ಯದ 176 ತಾಲೂಕು ಕೇಂದ್ರಗಳಲ್ಲಿ ಈ ಮೇಳ ನಡೆಯಲಿದೆ. ಎಲ್ಲಾ ವೈದ್ಯಕೀಯ ಪದ್ಧತಿಗಳನ್ನೊಳಗೊಂಡ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಜೊತೆಗೆ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ, ಸೌಲಭ್ಯಗಳನ್ನು ನೀಡಲಾಗುತ್ತದೆ.
ಆಯುಷ್ಮಾನ್ ಕಾರ್ಡ್ ವಿತರಣೆ, ಆಯುರ್ವೇದ ಚಿಕಿತ್ಸೆ ಮಾಹಿತಿ, ಯೋಗ ಮತ್ತು ಧ್ಯಾನದ ಬಗ್ಗೆ ತರಬೇತಿ ಮತ್ತು ಆಪ್ತ ಸಮಾಲೋಚನೆ ಸೇವೆಗಳು ಲಭ್ಯವಿರುತ್ತವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಲೂಕು ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಉಚಿತ ಆರೋಗ್ಯ ಮೇಳ ಆಯೋಜಿಸಿದೆ.