ಡಿ.ಕೆ.ಶಿ(ಬಂಡೆ)ಯಿಂದಲೇ ನಿಮಗೆ ಕಾಡಿದೆ ಕಂಟಕ!! ಮಾಜಿ ಸಿ.ಎಂ ಸಿದ್ದರಾಮಯ್ಯನವರನ್ನು ಎಚ್ಚರಿಸಿದ ಶಾಸಕ ರೇಣುಕಾಚಾರ್ಯ!!

ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ಅಧಿಕಾರದಲ್ಲಿರುವಾಗ ಭ್ರಷ್ಟಾಚಾರದ ಕೋಡಿಯೇ ಹರಿದಿತ್ತು, ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬುವುದನ್ನು ನೀವು ಮರೆತಿದ್ದೀರಿ. ಖುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುವುದನ್ನು ಬಂಡೆಯಾ ಇತಿಹಾಸವೇ ಹೇಳುತ್ತದೆ, ಹಗಲಿನಲ್ಲಿ ಕಂಡ ಬಾವಿಗೆ ಇರುಳಲ್ಲಿ ಬೀಳದಿರಿ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡುವ ಮೂಲಕ ಡಿ.ಕೆ.ಶಿ ಯನ್ನು ಟೀಕಿಸಿದ್ದಾರೆ.

 

ಸರಣಿ ಟ್ವೀಟ್ ಮಾಡಿದ ಶಾಸಕರು ಡಿ.ಕೆ.ಶಿಯವರನ್ನೇ ಬೊಟ್ಟು ಮಾಡಿ ಮಾತನಾಡಿದ್ದು, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಈ ಸ್ವಘೋಷಿತ ಡೈನಾಮಿಕ್ ಬಂಡೆ ತಯಾರಿದ್ದಾರೆ. 2023 ರ ಚುನಾವಣೆಯಲ್ಲಿ ನೀವೇ ಪ್ರಬಲ ಸ್ಪರ್ಧಿಯಾಗಿರುವುದರಿಂದ ನಿಮಗೆ ಗೊತ್ತಿಲ್ಲದಂತೆ ಮುಗಿಸಲು ಎಲ್ಲಾ ಹೊಸ ನಾಟಕ ಸೃಷ್ಟಿಸಬಹುದು. ಸದ್ಯ ಎಲ್ಲೋ ಕುಳಿತು, ಇನ್ನೆಲ್ಲೋ ಬಾಂಬ್ ಸಿಡಿಸುತ್ತಿರುವ ಆತ ಮುಂದೊಂದು ದಿನ ನಿಮ್ಮ ಬುಡಕ್ಕೇ ಇಡಬಹುದು ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯನವರನ್ನು ರೇಣುಕಾಚಾರ್ಯ ಎಚ್ಚರಿಸಿದರು.

Leave A Reply

Your email address will not be published.