ಅಪ್ರಾಪ್ತ ಯುವತಿಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ, ನಂತರ ಆತ್ಮಹತ್ಯೆಗೆ ಶರಣಾದ ಯುವಕ!

Share the Article

ವಸಾಯಿಯಲ್ಲಿನ ಲಾಡ್ಜ್ ವೊಂದರಲ್ಲಿ ಅಪ್ರಾಪ್ತೆಯನ್ನು ಕೊಲೆ ಮಾಡಿರುವ ಯುವಕನೋರ್ವ ತಂದನಂತರ ರೈಲು ಹಳಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಹಾರಾಷ್ಟ್ರದ ಕಲಾಂಬ್ ಲಾಡ್ಜ್‌ನಲ್ಲಿ ಬಾಲಕಿಯನ್ನು ಕೊಂದು, ತದನಂತರ ಆತನೂ ಸಾವಿಗೆ ಶರಣಾಗಿದ್ದಾನೆ.

21 ವರ್ಷದ ಅಭಿಷೇಕ್ ಶಾ ತನ್ನ 17 ವರ್ಷದ ಗೆಳತಿಯೊಂದಿಗೆ ಲಾಡ್ಜ್‌ವೊಂದಕ್ಕೆ ಬಂದಿದ್ದು, ನಂತರ ಊಟ ತರುವುದಾಗಿ ಲಾಡ್ಜ್ ಮಾಲೀಕರಿಗೆ ಹೇಳಿ ಹೊರಗಡೆ ಹೋಗಿದ್ದಾನೆ. ಆದರೆ ತುಂಬಾ ಹೊತ್ತಾದರೂ ಆತ ಹಿಂತಿರುಗಲಿಲ್ಲ. ಹೀಗಾಗಿ ಲಾಡ್ಜ್ ಮಾಲೀಕರು ಕೋಣೆಗೆ ಹೋಗಿ ನೋಡಿದಾಗ ಬಾಲಕಿ ಕೊಲೆಯಾದ ರೀತಿಯಲ್ಲಿ ಬಿದ್ದಿದ್ದಾಳೆ. ಗಾಬರಿಗೊಂಡ ಮಾಲೀಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿಗೆ ಪೊಲೀಸರು ಹುಡುಕಾಟ ನಡೆಸಿದಾಗ, ಆತ ರೈಲಿನಡಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.

ಮೃತ ಬಾಲಕಿ ಅಪ್ರಾಪ್ತಯಾಗಿದ್ದು, ಆಕೆ ಲಾಡ್ಜ್‌ಗೆ ಬಂದಿದ್ದು ಹೇಗೆ? ಅವರಿಗೆ ಲಾಡ್ಜ್ ಮಾಲೀಕರು ರೂಂನಲ್ಲಿರಲು ಅವಕಾಶ ನೀಡಿದ್ದು ಯಾವ ಆಧಾರದ ಮೇಲೆ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.

Leave A Reply