ಮುಸ್ಲಿಂ ಬಾಹುಳ್ಯ ಇರೋ ಊರು ಸಮಾಜಕ್ಕೆ ದೊಡ್ಡ ಕಂಟಕ-ಪ್ರಮೋದ್ ಮುತಾಲಿಕ್
ಉಡುಪಿ : ಅಂದು ತೊಗಾಡಿಯಾ ಅವರನ್ನು ನಿಷೇಧಿಸಿದಾಗ ಈಶ್ವರಪ್ಪ ಸದನದಲ್ಲಿ ಪ್ರಶ್ನೆ ಮಾಡಿದ್ದರು. ಈಗ ಅದೇ ಸರಕಾರ ನಾನು ಉಡುಪಿಗೆ ಬಾರದಂತೆ ನಿಷೇಧ ಹೇರಿದೆ. ಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ಅದಕ್ಕೆ ತಕ್ಕ ಉತ್ತರವನ್ನು ಸಮಾಜ ನೀಡುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಗಂಗೊಳ್ಳಿ ಇಡೀ ರಾಜ್ಯಕ್ಕೆ ಜಾಗೃತಿಯ ಸಂದೇಶ ಕೊಟ್ಟ ಪ್ರದೇಶ. ಇಲ್ಲಿ ಮೀನುಗಾರರಿಗೆ ನಿಷೇಧ ಹೇರಿದ ಕಾರಣ ರಾಜ್ಯಾದ್ಯಂತ ವ್ಯಾಪಾರ ಅಸಹಕಾರ ಚಳುವಳಿ ಆರಂಭವಾಯಿತು. ಮುಸ್ಲಿಂ ಬಾಹುಳ್ಯ ಊರುಗಳು ಸೂಕ್ಷ್ಮ ಪ್ರದೇಶ ಆಗುತ್ತಿವೆ.ಇದು ಸಮಾಜಕ್ಕೆ ದೊಡ್ಡ ಗಂಡಾತರ ತಂದಿಡಲಿದೆ. ಸರ್ಕಾರ ಆ ಗಲಭೆಕೋರರ ಮನೋಬಲ ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.
ಪಿಎಫ್ ಐ ನಿಷೇಧಿಸಬೇಕು ಎಂದು ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಪಟ್ಟು ಹಿಡಿದಿತ್ತು. ಆದರೆ ಈಗ ಪಿ ಎಫ್ ಐ ನಿಷೇಧಕ್ಕೆ ದಾಖಲೆಯ ಕೊರತೆಯಿದೆ ಎಂದು ಸಬೂಬು ಹೇಳುತ್ತಿದೆ. ಪಿಎಫ್ ಐ ನಿಷೇಧಿಸದೇ ಹೋದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.