ಪ್ರಿಯಕರನ ಜೊತೆ ಚಕ್ಕಂದ ಆಡುವಾಗ ಸಿಕ್ಕಿಬಿದ್ದ ಮೂರು ಮಕ್ಕಳ ತಾಯಿ ;

ಆಕೆ ಮೂರು ಮಕ್ಕಳ ತಾಯಿ. ಗಂಡ ಬಾಂಬೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಊರಿಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಆದರೆ ಮಹಿಳೆಗೆ ಮೂರು ಮಕ್ಕಳಾದರೂ ಕಾಮದ ಹಸಿವು ಕಡಿಮೆಯಾಗಿರಲಿಲ್ಲವೇನೋ. ಗಂಡ ಬಾಂಬೆಯಲ್ಲಿ ಸಂಸಾರಕ್ಕಾಗಿ ದುಡಿಯುತ್ತಿದ್ದ. ಈ ಕಡೆ ಗಂಡ ಮನೆಯಲ್ಲಿ ಇಲ್ಲ ಅನ್ನೋದನ್ನೇ ನೆಪ ಮಾಡಿದ ಹೆಂಡತಿ ಊರಿನ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು. ಇದರ ಪರಿಣಾಮವಾಗಿ ಏನಾಯ್ತು ಇಲ್ಲಿದೆ ಸ್ಟೋರಿ.

ಈ ಮೂರು ಮಕ್ಕಳ ತಾಯಿ ತನ್ನ ಪ್ರಿಯಕರನ ಜೊತೆ ಚಕ್ಕಂದ ಆಡೋ ಟೈಮ್‌ನಲ್ಲಿ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಆ ದಿನ ರಾತ್ರಿ ಮಹಿಳೆಯ ಮನೆಗೆ ಈ ಪ್ರಿಯಕರ ಬಂದಿದ್ದು, ಅದೇ ಗ್ರಾಮದ ಜನರು ನೋಡಿದ್ದಾರೆ. ಹಾಗಾಗಿ ಇಬ್ಬರನ್ನೂ ಹಿಡಿಯಲು ಗ್ರಾಮಸ್ಥರಿಗೆ ಸುಲಭವಾಗಿದೆ.


Ad Widget

Ad Widget

Ad Widget

ಜಾರ್ಖಂಡ್‌ನ ದುಮ್ಮಾ ರಾಮಗಢದ ಕುಶ್ಮಿನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಮಹಿಳೆಯ ಮನೆಗೆ ಈ ಗೆಳೆಯ ಸದ್ದಿಲ್ಲದೆ ಬಂದಿದ್ದ. ಇದೇ ವೇಳೆ ಗ್ರಾಮಸ್ಥರು ಮಹಿಳೆಯ ಮನೆಗೆ ನುಗ್ಗಿ ಇಬ್ಬರನ್ನೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದ್ದಾರೆ. ಇದೇ ವೇಳೆ ಗ್ರಾಮದ ಜನರು ಇಬ್ಬರನ್ನೂ ಗ್ರಾಮ ಪ್ರಧಾನರಿಗೆ ಒಪ್ಪಿಸಿದ್ದಾರೆ. ಮೊದಲು ವ್ಯಕ್ತಿಗೆ 1.5 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಆದಾಗ್ಯೂ, ನಂತರ ಇಬ್ಬರಿಂದ ತಲಾ 20,000 ರೂಪಾಯಿಗಳನ್ನು ದಂಡ ವಿಧಿಸಲಾಗಿದೆ.

ಗ್ರಾಮಸ್ಥರು ಈ ಹಿಂದೆ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದರೂ ಮಂಗಳವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಅಂತ ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: