ಪ್ರಗತಿಪರ ಶಾಸಕ,‌ ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪಕ ವಿಧಿವಶ !

ಸಿಪಿಐಎಂ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿದ್ದ ಬಿ.ವಿ. ಶ್ರೀರಾಮ ರೆಡ್ಡಿ ಪ್ರಗತಿಪರ ಶಾಸಕರೆಂದೇ ಹೆಸರುವಾಸಿಯಾಗಿದ್ದರು. ಇಂದು ಶ್ರೀರಾಮ ರೆಡ್ಡಿ ವಿಧಿವಶರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿರುವ ಮನೆಯಲ್ಲೇ ಕುಸಿದುಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಸಿಪಿಐಎಂ ಪಕ್ಷ ತೊರೆದಿದ್ದ ಅವರು ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪಿಸಿದ್ದರು. ಸಾಮಾಜಿಕ ಹೋರಾಟ ಆರಂಭಿಸಿದ್ದರು. ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದರು. ಶ್ರೀರಾಮ ರೆಡ್ಡಿಯವರ ನಿಧನಕ್ಕೆ ರಾಜಕೀಯ ಮುಖಂಡರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply