‘SSLC ಪರೀಕ್ಷಾ ಫಲಿತಾಂಶ’ : ಮೇ.12ಕ್ಕೆ ರಿಸಲ್ಟ್ ರಿಲೀಸ್!!!
ಎಸ್ಎಸ್ಎಲ್ಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಎಸ್ಎಸ್ಎಲ್ಸಿ ವೆಬ್ಸೈಟ್ನಲ್ಲಿ ಕೀ ಉತ್ತರಗಳನ್ನ ಪ್ರಕಟಿಸಲಾಗಿದೆ. ಸದ್ಯ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ತಾತ್ಕಾಲಿಕ ದಿನಾಂಕ ನಿಗಧಿ ಮಾಡಿದ್ದು ಮೇ 12ರಂದು ರಿಸಲ್ಟ್ ಬಿಡುಗಡೆಯಾಗಲಿದೆ ಎಂದಿದೆ.
ಏಪ್ರಿಲ್ 12ರಿಂದಲೇ ವೆಬ್ಸೈಟ್ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಮೇ 12ರಂದು ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ತಿಳಿಸಿದೆ.
ಫಲಿತಾಂಶ ಪ್ರಕಟಕ್ಕೆ SSLC ಬೋರ್ಡ್ ನಿಂದ ತಾತ್ಕಾಲಿಕ ಡೇಟ್ ನೀಡಲಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಮೇ 12ರಂದೇ ಫಲಿತಾಂಶ ಘೋಷಣೆ ಮಾಡಲಾಗುತ್ತೆ. ಕೀ ಉತ್ತರಗಳು ಏ.12ರಿಂದಲೇ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿವೆ. ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲು SSLC ಬೋರ್ಡ್ ನಿರ್ಧರಿಸಿದೆ. ಆಕ್ಷೇಪಣೆ ಬಳಿಕ ಮಾದರಿ ಉತ್ತರಗಳು ಮೌಲ್ಯಮಾಪಕರಿಗೆ ರವಾನಿಸಲಾಗುತ್ತೆ. ಏ.21ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿವೆ.
10 ದಿನಗಳ ಕಾಲ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಮೌಲ್ಯಮಾಪನದ ಬಳಿಕ ವೆಬ್ ಸೈಟ್ ನಲ್ಲಿ ಅಂಕಗಳ ಅಪ್ಲೋಡ್ ಕಾರ್ಯ ನಡೆಯುತ್ತೆ. ಕಂಪ್ಯೂಟರ್ನಲ್ಲಿ ಅಂಕಗಳ ಫೈನಲೈಸ್ ಮಾಡಲಾಗುತ್ತೆ. ಈ ಕಾರ್ಯ ಮುಗಿದ ಒಂದು ವಾರದಲ್ಲೇ ಫಲಿತಾಂಶ ಪ್ರಕಟವಾಗುತ್ತೆ. ರಾಜ್ಯದ ಒಟ್ಟು 238 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಪ್ರತೀ ಜಿಲ್ಲೆಯಲ್ಲೂ ವಿಷಯವಾರು ಮೌಲ್ಯಮಾಪನ ಕೇಂದ್ರಗಳಿವೆ. ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶದ ಸಂದೇಶ ರವಾನಿಸಲಾಗುವುದು ಎಂಬ ಮಾಹಿತಿ ಇದೆ.