ಬೆಳ್ತಂಗಡಿ: ವೇಣೂರಿನಲ್ಲಿ ನೇಣಿಗೆ ಕೊರಳೊಡ್ಡಿದ ಯುವಕ

ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಮೃತರನ್ನು ವೇಣೂರಿನ ಪೆರಿಯೊಟ್ಟು ನಿವಾಸಿಯಾಗಿರುವ ಸಚಿನ್(27) ಎಂದು ಗುರುತಿಸಲಾಗಿದೆ.

ಇವರು ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಒಂದು ತಿಂಗಳ ರಜೆಯ ನಿಮಿತ್ತ ಮನೆಗೆ ಬಂದಿದ್ದರು. ಇಂದು ಮನೆಯ ಗುಡ್ಡೆಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ವೇಣೂರಿನ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ರಾಮಪ್ಪ ಪೂಜಾರಿ ಹಾಗೂ ಶೀಲಾವತಿ ಇವರ ಮಗನಾಗಿದ್ದು ಅಣ್ಣ, ಅಕ್ಕ ತಂಗಿ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

Leave A Reply

Your email address will not be published.