ವಿಲೇಜ್ ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆ ದಿನ ಮೇ.10

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸುವರ್ಣಾವಕಾಶವಿದ್ದು,ಉತ್ತರ ಕನ್ನಡ ಗ್ರಾಮ ಪಂಚಾಯತ್​ ವಿಲೇಜ್ ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು : ಉತ್ತರ ಕನ್ನಡ ಗ್ರಾಮ ಪಂಚಾಯತ್
ಹುದ್ದೆಗಳ ಸಂಖ್ಯೆ : 102
ಉದ್ಯೋಗ ಸ್ಥಳ : ಕಾರವಾರ, ಉತ್ತರ ಕನ್ನಡ – ಕರ್ನಾಟಕ
ಹುದ್ದೆಯ ಹೆಸರು : ಗ್ರಾಮ ಲೆಕ್ಕಾಧಿಕಾರಿ (VA)
ವೇತನ : ರೂ.21400-42000/- ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು : ಪ್ರಾರಂಭ ದಿನಾಂಕ 11-04-2022
ಅರ್ಜಿ ಸಲ್ಲಿಸಲು : ಕೊನೆಯ ದಿನಾಂಕ 10-05-2022

ಹುದ್ದೆಯ ವಿವರ
2017-18 ಬ್ಯಾಕ್ ಲಾಗ್ 2
2018-19 ಬ್ಯಾಕ್ ಲಾಗ್ 14
2021-22 ಬ್ಯಾಕ್ ಲಾಗ್ 86
ಒಟ್ಟು 102

ಶೈಕ್ಷಣಿಕ ಅರ್ಹತೆ:
ಉತ್ತರ ಕನ್ನಡ ಗ್ರಾಮ ಲೆಕ್ಕಿಗರ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ PUC ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:
ಉತ್ತರ ಕನ್ನಡ ಗ್ರಾಮ ಲೆಕ್ಕಿಗರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 10ನೇ ಮೇ 2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.

ವಯಸ್ಸಿನ ಸಡಿಲಿಕೆ:
ವರ್ಗ 2A, 2B, 3A & 3B ಅಭ್ಯರ್ಥಿಗಳು: 3 ವರ್ಷಗಳು
SC/ST ಅಭ್ಯರ್ಥಿಗಳು: 5 ವರ್ಷ

ಅರ್ಜಿ ಶುಲ್ಕ:
SC/ST ವರ್ಗ 1 ಮತ್ತು ಮಹಿಳಾ ಅಭ್ಯರ್ಥಿಗಳು: ರೂ.100/-
ಇತರೆ ಅಭ್ಯರ್ಥಿಗಳು: ರೂ.200/-ನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ:
12 ನೇ ತರಗತಿ ಅಂಕಗಳ ಅರ್ಹತೆಯ ಆಧಾರ (CBSC / ICSC)

ಯಾವುದೇ ಮಾಹಿತಿಗೆ 08382 -229957 ಅಥವಾ vakarwar@gmail.com ಸಂಪರ್ಕಿಸಿ

Leave A Reply

Your email address will not be published.