ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ : 2 ಕಡೆ ಮಿರರ್, ಇಂಡಿಕೇಟರ್ ಇಲ್ಲದಿದ್ರೆ ಇನ್ನು ಮುಂದೆ ಫೈನ್ ಗ್ಯಾರಂಟಿ!
ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ 500 ರೂ. ದಂಡ. ತೆರಬೇಕಾಗುತ್ತದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಮುಂದಿನ ವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದರೆ 500 ರೂ. ದಂಡ ತೆರಬೇಕಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ನಗರದಲ್ಲಿ ಸಂಭವಿಸುತ್ತಿರುವ ಅಪಘತಗಳಲ್ಲಿ ಹೆಚ್ಚಿನದಾಗಿ ದ್ವಿಚಕ್ರ ವಾಹನಗಳೇ ತುತ್ತಾಗುತ್ತಿದ್ದು, ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.