ಜೇಬಲ್ಲಿ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಶಾಲಾ ಶಿಕ್ಷಕಿ ಅರೆಸ್ಟ್ !! |ಪೊಲೀಸರು ಬಂದೂಕು ವಶಪಡಿಸಿಕೊಳ್ಳುತ್ತಿರುವ ಲೈವ್ ವೀಡಿಯೋ ವೈರಲ್

ಟೀಚರ್ ಎಂಬ ಪದ ಕೇಳುತ್ತಿದ್ದಂತೆಯೇ ಕೈಯಲ್ಲಿ ಪೆನ್ನು ಹಿಡಿದ ವ್ಯಕ್ತಿಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈಗ ಕಾಲ ಬದಲಾಗಿದೆ, ಏಕೆಂದರೆ ಇಲ್ಲೊಬ್ಬ ಶಿಕ್ಷಕಿ ಪೆನ್ ಅಲ್ಲ, ಗನ್ ಇಟ್ಕೊಂಡು ಸಿಕ್ಕಿಬಿದ್ದಿದ್ದಾಳೆ.


Ad Widget

Ad Widget

ಹೌದು. ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು. ಆದರೆ, ಇದು ನಿಜ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಮಹಿಳಾ ಶಿಕ್ಷಕಿಯೋರ್ವಳ ಬಳಿಯಿಂದ ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ.
ಮೈನ್‌ಪುರಿಯ ಈ ಶಿಕ್ಷಕಿಯಿಂದ ಬಂದೂಕು ವಶಪಡಿಸಿಕೊಳ್ಳುವ ಲೈವ್ ವೀಡಿಯೋ ವೈರಲ್ ಆಗಿದೆ.


Ad Widget

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಸದರ್ ಕೊತ್ವಾಲಿಯ ಜೈಲ್ ತಿರಾಹಾದಿಂದ ಪೊಲೀಸರು ಮಹಿಳೆ ಬಳಿಯಿಂದ ಈ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ವೀಡಿಯೋದಲ್ಲಿ, ಸುತ್ತಮುತ್ತಲಿನ ಜನರು ಮಹಿಳೆಯನ್ನು ಆಶ್ಚರ್ಯದಿಂದ ನೋಡುತ್ತಿರುವುದನ್ನು ನೀವು ನೋಡಬಹುದು.

ಈ ವೀಡಿಯೋದಲ್ಲಿ ಪೊಲೀಸರು ಶಿಕ್ಷಕಿಯಿಂದ ನಾಡ ಪಿಸ್ತೂಲ್ ಅನ್ನು ಹೇಗೆ ವಶಕ್ಕೆ ಪಡೆದಿದ್ದಾರೆ ಎಂಬುದನ್ನು ನೀವು ನೋಡಬಹುದಾಗಿದೆ. ಶಿಕ್ಷಕಿ ಸಾಮಾನ್ಯ ಮಹಿಳೆಯಂತೆ ಜೀನ್ಸ್ ಮತ್ತು ಕುರ್ತಾ ಧರಿಸಿದ್ದಾರೆ. ಆದರೆ, ಪಿಸ್ತೂಲ್ ಅನ್ನು ಆಕೆ ತನ್ನ ಜೀನ್ಸ್‌ನಲ್ಲಿ ಇಟ್ಟುಕೊಂಡಿದ್ದಾಳೆ. ಅದನ್ನು ಮಹಿಳಾ ಪೊಲೀಸರು ತಮ್ಮ ಕೈಯಾರೆ ಹೊರತೆಗೆದಿದ್ದಾರೆ.

Ad Widget

Ad Widget

Ad Widget

ಬಂದೂಕು ಪತ್ತೆಯಾದ ನಂತರ ಪೊಲೀಸರು ಆರೋಪಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿಕ್ಷಕಿಯನ್ನು ಎಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು ಮತ್ತು ಆಕೆ ಗನ್ ಹಿಡಿದು ಎಲ್ಲಿಗೆ ಹೋಗುತ್ತಿದ್ದಳು ಎಂಬ ಮಾಹಿತಿ ಕಲೆಹಾಕುವಲ್ಲಿ ಇದೀಗ ಪೊಲೀಸರು ನಿರತರಾಗಿದ್ದಾರೆ.

error: Content is protected !!
Scroll to Top
%d bloggers like this: