ಗೌತಮ್ ಅದಾನಿ ಇದೀಗ ಭಾರತದ ನಂಬರ್ ಒನ್ ಸಾಹುಕಾರ | ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ !

ಭಾರತದ ಉದ್ಯಮಿ, ಗೌತಮ್ ಅದಾನಿ ಇದೀಗ ಗೂಗಲ್‌ನ ಖ್ಯಾತ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರನ್ನು ಹಿಂದಿಕ್ಕಿದ್ದಾರೆ, ಆ ಮೂಲಕ ಭಾರತದ ನಂಬರ್ ಒನ್ ಸಾಹುಕಾರ ಮತ್ತು ವಿಶ್ವದ ಟಾಪ್ ಟೆನ್ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿಯೇ ಬರೋಬ್ಬರಿ 18 ಶತಕೋಟಿ ಡಾಲರ್ ಗೂ ( 18 ಬಿಲಿಯನ್) ಹೆಚ್ಚು ನಿವ್ವಳ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆತ ಉಲ್ಕೆಯಂತೆ ಮೇಲೆದ್ದು ನಿಂತಿದ್ದಾರೆ. ಅವರ ನಿವ್ವಳ ಮೌಲ್ಯದಲ್ಲಿ ಈ ಉಲ್ಕಾಪಾತದ ಏರಿಕೆಯ ನಂತರ, ಅದಾಗಲೇ100 ಬಿಲಿಯನ್ ಡಾಲರ್ ಕ್ಲಬ್‌ಗೆ ಪ್ರವೇಶಿಸಿದ ಅದಾನಿ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷರೂ ಆದ ಗೌತಮ್ ಅದಾನಿ, ಬ್ಲೂಮ್‌ಬರ್ಗ್‌ನ ಟಾಪ್-10 ಬಿಲಿಯನೇರ್ ಪಟ್ಟಿಯಲ್ಲಿ ಇದೀಗ ಇರುವ ಏಕೈಕ ಭಾರತೀಯರಾಗಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಅಂಕಿಅಂಶಗಳ ಪ್ರಕಾರ, ಗೌತಮ್ ಅದಾನಿ ಇದೀಗ 118 ಬಿಲಿಯನ್ ಡಾಲರ್ ನ ಒಡೆಯ. 59 ವರ್ಷದ ಈ ಕುಬೇರ ದೊರೆಯು, ಟೆಸ್ಲಾ ಇಂಕ್‌ನ ಎಲೋನ್ ಮಸ್ಕ್, Amazon.co ಜೆಫ್ ಬೆಜೋಸ್, ಬರ್ಕ್‌ಷೈರ್ ಹಾಥ್‌ವೇಯ ವಾರೆನ್ ಬಫೆಟ್, LVMH ಸಿಇಒ ಬರ್ನಾರ್ಡ್ ಅರ್ನಾಲ್ಟ್ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ನಂತರದ ಜಾಗದಲ್ಲಿ ನಿಂತು ಕೊಂಡು, ಇವತ್ತು ಜಾಗತಿಕವಾಗಿ ವಿಶ್ವದ ಆರನೇಯ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊಮ್ಮಿದ್ದಾರೆ.

ಒಂದು ವಾರದಲ್ಲಿ $18 ಶತಕೋಟಿಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಅದಾನಿ ಗೂಗಲ್‌ನ ಪ್ರಸಿದ್ಧ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರನ್ನು ಹಿಂದಿಕ್ಕಿದ್ದಾರೆ.
ಆಶ್ಚರ್ಯವೆಂದರೆ ಅದಾನಿ ಅವರ ನಿವ್ವಳ ಮೌಲ್ಯವು ಏಪ್ರಿಲ್ 4 ರಂದು 100 ಶತಕೋಟಿ ಏರಿತ್ತು. ಇದೇ ಮೊತ್ತ ಒಂದು ವರ್ಷದ ಹಿಂದೆ ಸರಿ ಸುಮಾರು ಇವತ್ತಿನ ಅರ್ಧದಷ್ಟು ಅಂದರೆ 57 ಶತಕೋಟಿ ಡಾಲರ್ ಮಾತ್ರ ಆಗಿತ್ತು.

ಅದಾನಿ ಗ್ರೂಪ್ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಒಟ್ಟು ಏಳು ಘಟಕಗಳಿಂದ ಕೂಡಿದೆ ಮತ್ತು 200 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಒಟ್ಟು ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಟೆಸ್ಲಾದ ಮಸ್ಕ್ $249 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, $176 ಶತಕೋಟಿ ಡಾಲರ್‌ಗಳೊಂದಿಗೆ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ, $139 ಶತಕೋಟಿಯೊಂದಿಗೆ ಫ್ರೆಂಚ್‌ನ ಅರ್ನಾಟ್ ಮೂರನೇ ಸ್ಥಾನದಲ್ಲಿದ್ದಾರೆ, $130 ಶತಕೋಟಿ ಆಸ್ತಿಯೊಂದಿಗೆ ಬಿಲ್ ಗೇಟ್ಸ್ 4 ನೇ ಸ್ಥಾನದಲ್ಲಿದ್ದಾರೆ, ವಾರೆನ್ ಬಫೆಟ್ ಐದನೇ ಸ್ಥಾನದಲ್ಲಿದ್ದಾರೆ. 127 ಶತಕೋಟಿ ಡಾಲರ್ ದೊರೆ ಅದಾನಿ ಆರನೇ ಸ್ಥಾನದಲ್ಲಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು $ 97 ಬಿಲಿಯನ್ ಆಗಿದೆ ಮತ್ತು ಬ್ಲೂಮ್‌ಬರ್ಗ್‌ನ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 11 ನೇ ಸ್ಥಾನದಲ್ಲಿದ್ದಾರೆ.

Leave A Reply

Your email address will not be published.