ಯೋಗಿ ಆದಿತ್ಯನಾಥ್ ರಿಂದ ಸ್ಪೂರ್ತಿ ಪಡೆದು ಮಧ್ಯಪ್ರದೇಶದಲ್ಲಿ ‘ ಬುಲ್ಡೋಜರ್’ ಕಲರವ!
ಮೊನ್ನೆ ರಾಮನವಮಿಯ ಸಂದರ್ಭ ವ್ಯಾಪಕ ಹಿಂಸೆಗೆ ಕಾರಣರಾಗಿದ್ದ ವ್ಯಕ್ತಿಗಳ ಮೇಲೆ ಮಧ್ಯಪ್ರದೇಶದ ಬಿಜೆಪಿ ಸರಕಾರ ಬುಲ್ಡೋಜರ್ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಹಿಂಸೆಗೆ ಕಾರಣರಾದವರಿಗೆ ತಕ್ಕಪಾಠ ಕಲಿಸಲು ಈ ರೀತಿಯ ಕ್ರಮವನ್ನು ಅನುಸರಿಸಲಾಗಿದೆ.
ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ
ಅಕ್ರಮ ಕಟ್ಟಡ ಸಂಬಂಧಿಸಿದಂತೆ ಜಿಲ್ಲಾಡಳಿತ ಸೋಮವಾರ 20 ಅಕ್ರಮ ಕಟ್ಟಡ ಹಾಗೂ ಅಂಗಡಿಗಳನ್ನು
ನೆಲಸಮಗೊಳಿಸಿ ಬಿಸಿ ಮುಟ್ಟಿಸಿದೆ.
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಕೈಗೊಂಡ ಮಾದರಿಯಲ್ಲೇ ಸಾಲುಸಾಲು ಬುಲ್ಡೋಜರ್ ಗಳು ರಸ್ತೆಗಿಳಿದಿದ್ದವು.
ನಗರದ ಛೋಟೆ ಮೋಹನ್ ಟಾಕೀಸ್ ಪ್ರದೇಶದಿಂದ ಧ್ವಂಸ ಕಾರ್ಯ ಆರಂಭಗೊಂಡಿದ್ದು,
ನಾಲ್ಕು ಅಕ್ರಮ ಕಟ್ಟಡಗಳನ್ನು
ನೆಲಸಮಗೊಳಿಸಲಾಗಿದೆ. ಇದಾದ ಕೆಲ ಹೊತ್ತಿನಲ್ಲಿ ಆನಂದ್ ನಗರ ಮತ್ತು ಖಾಸ್ಟಾಸ್ವಾಡಿಯಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವಲಾಯಿತು.
ಕೆಡವಲಾದ ಎಲ್ಲಾ ಅಂಗಡಿಗಳು ಹಾಗೂ ಮನೆಗಳು ಅತಿಕ್ರಮಣ ಮಾಡಲಾದ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡಗಳಾಗಿವೆ. ಈ ಪ್ರದೇಶಗಳಲ್ಲಿ ಕಲ್ಲು ತೂರಾಟ ವರದಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ ಎಂದು ಹೇಳಲಾಗಿದೆ.
ರಾಮನವಮಿಯ ದಿನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 84 ಜನರನ್ನು ಬಂಧಿಸಲಾಗಿದೆ. ಅವರಿಗೆ ತಕ್ಕ ಪಾಠ ಕಲಿಸಲು, ಅವರ ಅಕ್ರಮ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಕಮಿಷನರ್ ಡಾ. ಪವನ್ ಕುಮಾರ್ ಶರ್ಮಾ ತಿಳಿಸಿದ್ದಾರೆ.