ಮಂಗಳೂರು : ಸಾಲಬಾಧೆಯಿಂದ ನೊಂದು ಯುವಕ ಆತ್ಮಹತ್ಯೆ !

Share the Article

ಸಾಲಬಾಧೆಯಿಂದ ನೊಂದುಕೊಂಡು ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಗರ ಹೊರ ವಲಯದ ಎನ್ ಐಟಿಕೆ ಬಳಿ ನಡೆದಿದೆ.

ಕಾಟಿಪಳ್ಳ ನಿವಾಸಿ ಲಾರೆನ್ಸ್ ಡಿಸೋಜ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಈತ ಬರೆದಿದ್ದ ಡೆತ್ ನೋಟ್ ಲಭ್ಯವಾಗಿದ್ದು, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈಗ ತನ್ನ ಸ್ನೇಹಿತನಿಂದ ಸಾಲ ಪಡೆದಿದ್ದ. ಆದರೆ, ಅದನ್ನು ಮರಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿರುವುದಾಗಿ ಉಲ್ಲೇಖಿಸಿದ್ದಾನೆ. ಇಂದು ಕೆಲಸಕ್ಕೆ ರಜೆ ಹಾಕಿರುವ ಲಾರೆನ್ಸ್ ಸಮುದ್ರ ತಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Leave A Reply