ಲೈಂಗಿಕ ಪರಾಕಾಷ್ಠೆಯ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟಿ!

ತಮಿಳು ಸಿನಿಮಾ ನಟಿ, ಹಾಗೂ ನಟ ಸಿಂಬು ನ ಪ್ರೀತಿಯ ಹುಡುಗಿ ನಿಧಿ ಅಗರವಾಲ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ. ಬೋಲ್ಡ್ ಫೋಟೋಗಳಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ ಈ ಮಾದಕ ಚೆಲುವೆ. ಇಂತಿಪ್ಪ ಈ ನಟಿ, ಈಗ ಕಾಂಡೋಮ್ ಗೆ ಸಂಬಂಧಿಸಿದ ಪ್ರಮೋಷನಲ್ ವೀಡಿಯೋ ಮಾಡಿದ್ದು, ಅಭಿಮಾನಿಗಳಿಂದ ತೀವ್ರವಾದ ಟೀಕೆಗೆ ಗುರಿಯಾಗಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ನಿಧಿ ಅವರು ಡುರೆಕ್ಸ್ ಕಾಂಡೋಮ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಈ ನಟಿ, ‘ ಲೈಂಗಿಕ ಪರಾಕಾಷ್ಠೆಯನ್ನು ಅನುಭವಿಸುವುದು ಉತ್ತಮ. ಆದರೆ ಡ್ಯುರೆಕ್ಸ್ ಇಂಟೆನ್ಸ್ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ಮಾಡಿದರೆ, ಉದ್ರೇಕ ಹೆಚ್ಚುಗೊಳ್ಳುತ್ತದೆ ಹಾಗೂ ಅದನ್ನು ತೀವ್ರಗೊಳಿಸುವ ಸಮಯ ಇದು’ ಎಂದು ಬರೆದಿದ್ದಾರೆ.

ಈ ಬಗ್ಗೆ ಕೆಲವರು ನಿಧಿಯ ನೇರ ನುಡಿಗಳನ್ನು ಮೆಚ್ಚಿಕೊಂಡರೆ, ಕೆಲವರು ನೀವು ಇದನ್ನು ಬಳಸಿದ್ದೀರಾ? ನಿಮ್ಮ ಅನುಭವ ಹೇಳಿ, ನೀವು ಪ್ರಯತ್ನ ಮಾಡಿದ್ದೀರಾ ಎಂದು ಅಸಭ್ಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ನಿಧಿಗೆ ಇರುಸು ಮುರುಸಾಗಿರುವುದಂತೂ ಖಂಡಿತ.

ನಿಧಿ ಈಗ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ‘ ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

https://www.instagram.com/tv/CcNah-Zj5w6/?utm_source=ig_web_copy_link

Leave A Reply

Your email address will not be published.