ಸುರತ್ಕಲ್ : ಎನ್ ಐಟಿಕೆ ಬೀಚ್ ನಲ್ಲಿ ಅಕ್ಕ, ತಂಗಿಯರು ಸಮುದ್ರ ಪಾಲು!

Share the Article

ಸುರತ್ಕಲ್ : ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಅಕ್ಕ ತಂಗಿಯರು ನೀರುಪಾಲಾದ ಘಟನೆಯೊಂದು ಸುರತ್ಕಲ್ ಬೀಚ್ ನಲ್ಲಿ ನಡೆದಿದೆ.

ಶ್ರಾದ್ಧ ಕಾರ್ಯಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದಾಗ ಈ ದುರದೃಷ್ಟಕರ ಘಟನೆ ನಡೆದಿದೆ.

ಮೃತರನ್ನು ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ(21) ಮತ್ತು ತ್ರಿಶಾ(13) ಎಂದು ಗುರುತಿಸಲಾಗಿದೆ. ಇವರು ಪೊಲೀಸ್ ಸಿಬಂದಿಯ ಪುತ್ರಿಯರು ಎನ್ನುವ ಮಾಹಿತಿ ಲಭಿಸಿದೆ.

ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿ ಕಾರ್ಯದ ನಿಮಿತ್ತ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬಸ್ಥರ ಜೊತೆಗೆ ಎನ್‌ಐಟಿಕೆ ಬೀಚ್ ಗೆ ಆಗಮಿಸಿದ್ದರು. ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡಲು ಇಳಿದಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ.

ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave A Reply