ರಶ್ಮಿಕಾ ಮಂದಣ್ಣ ನ ಲವ್ ಅಫೇರ್ ನಿಂದ ಆಗಲಿದೆ ಸರ್ವನಾಶ ?  | ಖ್ಯಾತ ಸ್ವಾಮೀಜಿ ವೇಣು ಸ್ವಾಮಿ ಸ್ಫೋಟಕ ಹೇಳಿಕೆಗೆ ಬೆಚ್ಚಿದ ಚಿತ್ರ ಜಗತ್ತು

ಸೆಲೆಬ್ರಿಟಿಗಳ ಬಗ್ಗೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ವೇಣು ಸ್ವಾಮಿ 2 ವರ್ಷಗಳ‌ ಹಿಂದೆಯೇ ಸಮಂತಾ- ನಾಗಚೈತನ್ಯ ಡಿವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದರು. ಅದು ಸತ್ಯವೂ ಆಯಿತು.‌ಈಗ ರಶ್ಮಿಕಾ ಅವರ ಲವ್ ಅಫೇರ್ ಮತ್ತು ವೈವಾಹಿಕ‌ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರಶ್ಮಿಕಾ ಮಂದಣ್ಣ ಕೂಡ ಜ್ಯೋತಿಷಿ ವೇಣು ಅವರನ್ನು ಹಲವು ಬಾರಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಆಗಾಗ ಸಲಹೆಗಳನ್ನು ಪಡೆಯುತ್ತಿದ್ದರು. ರಶ್ಮಿಕಾ ಅವರಿಂದ ತಾರಾ ದೇವಿ ಪೂಜೆ ಮಾಡಿಸಿದ್ದರು, ವೇಣು ಸ್ವಾಮಿ ಅವರಿಂದ ರಶ್ಮಿಕಾ ಪೂಜೆ ಮಾಡಿಸಿದ ಫೋಟೋ, ವೀಡಿಯೋ ವೈರಲ್ ಆಗಿತ್ತು. ಈಗ ಇಬ್ಬರ ನಡುವೆಯೂ ಅಂತರ ಸೃಷ್ಟಿಯಾಗಿದೆ. ಬಿರುಕು ಉಂಟಾಗಿದೆ. ಇದಕ್ಕೆ ಉತ್ತರ ನೀಡಿದ್ದಾರೆ ವೇಣು ಸ್ವಾಮಿ.


Ad Widget

Ad Widget

Ad Widget

ನಾನು ಯಾವಾಗಲು ಪಾಸಿಟಿವ್​ಗಿಂತ ನೆಗಿಟಿವ್​ ಅನ್ನೇ ಹೆಚ್ಚಾಗಿ ಹೇಳುವ ವ್ಯಕ್ತಿ. ಪಾಸಿಟಿವ್​ ಹೇಳಿ ಬಕೆಟ್​ ಹಿಡಿಯುವ ಅಥವಾ ಮಸ್ಕಾ ಹೊಡೆಯುವ ವ್ಯಕ್ತಿ ನಾನಲ್ಲ. ಕೆಲವು ಸಂದರ್ಭಗಳಲ್ಲಿ ರಶ್ಮಿಕಾ ತೆಗೆದುಕೊಂಡ ನಿರ್ಣಯಗಳು ಸರಿಯಿರಲಿಲ್ಲ. ನಿಮ್ಮ ನಿರ್ಧಾರ ಸರಿಯಿಲ್ಲ ಎಂದು ನಾನು ನೇರವಾಗಿ ಹೇಳಿದೆ. ಆದರೆ, ಅದನ್ನು ಆಕೆ ಒಪ್ಪಿಕೊಳ್ಳಲಿಲ್ಲ. ನನ್ನನ್ನು ದಿಕ್ಕು ತಪ್ಪಿಸುತ್ತಿದ್ದಾನೆಂದು ಭಾವಿಸಿದ್ದಾರೆ. ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ನನಗೆ ಎಚ್ಚರಿಕೆ ನೀಡಿದರು. ಅದಕ್ಕೆ ನಾನು ಸುಮ್ಮನಾಗಿಬಿಟ್ಟಿದ್ದೇನೆ ಎಂದು ಹೇಳಿದರು.

ಅವರ ಲವ್​ ಅಫೇರ್​ ಮುಂದೆ ಸಮಸ್ಯೆ ಆಗಲಿದೆ. ಇದೇ ಎಚ್ಚರಿಕೆಯನ್ನು ಆಕೆಗೆ ನೀಡಿದೆ. ಆದರೆ, ಇದು ನನ್ನ ವೈಯಕ್ತಿಕ ವಿಚಾರ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ವೈಯಕ್ತಿಕ ವಿಚಾರದ ಬಗ್ಗೆ ನೀವೇಕೆ ಮಾತನಾಡುತ್ತೀರಾ ಎಂದು ಖಾರವಾಗಿ ಮಾತನಾಡಿದರು. ಅಂದಿನಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ.

2024ರವರೆಗೆ ಅವರ ಭವಿಷ್ಯ ಚೆನ್ನಾಗಿ ಇರುತ್ತದೆ. ಆಮೇಲೆ ಅವರಿಗೆ ಸಂಕಷ್ಟಗಳು ಎದುರಾಗಲಿವೆ ನಟಿ ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಸುಖಮಯ ಆಗಿರುವುದಿಲ್ಲ, ಮದುವೆ ನಂತ್ರ ಡಿವೋರ್ಸ್ ಕೂಡ ಆಗಬಹುದು ಎಂದು ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: