ಇಲ್ಲಿದೆ ರಾಮನವಮಿಯ ಕೋಸಂಬರಿ- ಬೆಲ್ಲದ ಪಾನಕ ಮಾಡುವ ಸರಳ ವಿಧಾನ

ದೇಶದ ಎಲ್ಲಾ ಕಡೆ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ರಮ ನವಮಿಗೆ ಏನು ಸ್ಪೆಷಲ್ ಎಂದು ನೋಡುವುದಾದರೆ ಕೊಸಂಬರಿ ಪಾನಕ. ನಮ್ಮ ಕರ್ನಾಟಕದಲ್ಲಿ ಈ ದಿನಕ್ಕೆಂದೇ ಸ್ಪೆಷಲ್ ಪಾನಕ ತಯಾರಿಸಲಾಗುದು.

ನೇವಿದ್ಯಕ್ಕೆ ಪಾನಕ ಕೊಸಂಬರಿ ಹೇಗೆ ಮಾಡಲಾಗುವುದು ಇಲ್ಲಿದೆ ನೋಡಿ

ಬೆಲ್ಲದ ಪಾನಕ

ಬೇಕಾಗುವ ಪದಾರ್ಥಗಳು…

• ಬೆಲ್ಲ- 2 ಬಟ್ಟಲು

• ಏಲಕ್ಕಿ-3-4

• ಕಾಳು ಮೆಣಸು-5-6

• ಸಕ್ಕರೆ- ಒಂದು ಚಮಚ

• ಉಪ್ಪು- ಚಿಟಿಕೆಯಷ್ಟು

• ಜೀರಿಗೆ ಪುಡಿ- ಅರ್ಧ ಚಮಚ

• ನಿಂಬೆಹಣ್ಣು- ಒಂದು

ಮಾಡುವ ವಿಧಾನ…
ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಲು ಬಿಡಿ. ನಂತರ ಏಲಕ್ಕಿ, ಕಾಳು ಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ, ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ. ನಂತರ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿದರೆ ಬೆಲ್ಲದ ಪಾನಕ ಸವಿಯಲು ಸಿದ್ಧ.

ಕೋಸಂಬರಿ
ಬೇಕಾಗುವ ಪದಾರ್ಥಗಳು

• ಹೆಸರುಬೇಳೆ- ಅರ್ಧ ಗಂಟೆ ನೆನೆಸಿದ್ದು 1 ಬಟ್ಟಲು

• ಹಸಿಮೆಣಸಿನ ಕಾಯಿ- 1-2

• ಶುಂಠಿ-ಸ್ವಲ್ಪ

• ಕೊತ್ತಂಬರಿ- ಸ್ವಲ್ಪ

• ಉಪ್ಪು- ಸ್ವಲ್ಪ

• ಸೌತೆಕಾಯಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು

• ತೆಂಗಿನ ಕಾಯಿ ತುರಿ- ಒಂದು ಸಣ್ಣ ಬಟ್ಟಲು

• ಸಾಸಿವೆ- ಸ್ವಲ್ಪ

• ಕರಿಬೇವು-ಸ್ವಲ್ಪ

• ಒಣಗಿದ ಮೆಣಸಿನಕಾಯಿ- 2

• ನಿಂಬೆ ಹಣ್ಣು- ಒಂದು

ಮಾಡುವ ವಿಧಾನ…
ನೆನಿಸಿದ ಹೆಸರುಬೇಳೆಗೆ ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಉಪ್ಪು, ಸೌತೆಕಾಯಿ, ತೆಂಗಿನ ಕಾಯಿ ತುರಿ, ನಿಂಬೆಹಣ್ಣಿನ ರಸ ಎಲ್ಲವನ್ನೂ ಹಾಕಿ ಮಿಶ್ರಣ ಮಾಡಿ. ನಂತರ ಸಣ್ಣ ಪ್ಯಾನ್’ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಕರಿಬೇವು ಹಾಗೂ ಒಣಗಿದ ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಕಿ ಮಿಶ್ರಣ ಮಾಡಿ.

Leave A Reply

Your email address will not be published.