ಪುತ್ತೂರು: ಇಂದಿನಿಂದ ಆರಂಭವಾಗಲಿರುವ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಆಟೋಗಳಿಗೆ ನಿಷೇಧ !!
ರಾಜ್ಯದಲ್ಲಿ ಹಿಜಾಬ್ ಸಂಘರ್ಷದಿಂದ ಶುರುವಾಗಿರುವ ಧರ್ಮ ಯುದ್ಧ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಮುಸ್ಲಿಂ ಸಮುದಾಯದವರಿಗೆ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳ ವ್ಯಾಪಾರದಲ್ಲಿ ನಿರ್ಬಂಧ ಹೇರುತ್ತಿರುವಾಗ ದಕ್ಷಿಣ ಕನ್ನಡದ ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಆಟೋಗಳಿಗೆ ನಿಷೇಧ ಹೇರಲಾಗಿದೆ.
ರಾಜ್ಯದಲ್ಲಿ ಧರ್ಮ ಯುದ್ಧ ದಿನಕ್ಕೊಂದು ವಿಷಯ, ರೂಪ, ಬಣ್ಣ ಪಡೆಯುತ್ತಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಜೊತೆಗೆ ಇದೀಗ ಮುಸ್ಲಿಂ ಡ್ರೈವರ್ಸ್ ಬಹಿಷ್ಕಾರ ಆಗಿದೆ. ಜಾತ್ರೆ ವೇಳೆ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂಜಾಗರಣ ವೇದಿಕೆ ಪುತ್ತೂರಿನಾದ್ಯಂತ ಆಟೋಗಳಿಗೆ ಭಗವಾಧ್ವಜ ನೀಡಿ ಅಭಿಯಾನ ಆರಂಭಿಸಿದೆ. ನಾಳೆಯಿಂದ ಏಪ್ರಿಲ್ 20ರವರೆಗೆ ಮಹಾಲಿಂಗೇಶ್ವರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಜನ ಸೇರಲಿದ್ದಾರೆ.
ಭಗವಾಧ್ವಜ ಇರುವ ಆಟೋ ಮಾತ್ರ ಬಳಸೋಣ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಮೋಸ ಮಾಡ್ತಾರೆ. ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಅಲ್ಲದೆ, ಹಿಂದುತ್ವದ ಹೆಸರಿನಲ್ಲಿ ಬಂದ ಸರ್ಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸ್‍ಗಳನ್ನು ದಾಖಲಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧವೂ ಹಿಂದೂಜಾಗರಣ ವೇದಿಕೆ ಮುಖಂಡರು ಕಿಡಿಕಾರಿದ್ದಾರೆ.