ಪಂಚೆ ಎತ್ತಿ ಕಟ್ಟಿ ಫುಟ್ಬಾಲ್ ಗೋಲ್ ಬಾರಿಸಿದ ಮಾಜಿ ಸಿಎಂ !! | ಸಿದ್ದರಾಮಯ್ಯ ಅವರ ಫುಟ್ಬಾಲ್ ಕಿಕ್ ವೀಡಿಯೋ ಇದೀಗ ಸಖತ್ ವೈರಲ್

ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆ ದೇವರ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಅವರು ಫುಟ್ಬಾಲ್ ಮಾಡುವ ಮೂಲಕ ಮತ್ತೊಮ್ಮೆ ತನ್ನ ಅಭಿಮಾನಿಗಳನ್ನು ರಂಜಿಸಿದ್ದಾರೆ. ‌ಮೈಸೂರಿನ ರಾಮಕೃಷ್ಣ ನಗರದಲ್ಲಿ ನಿನ್ನೆ ರಾತ್ರಿ ಸಿದ್ದರಾಮಯ್ಯ ಫುಟ್ಬಾಲ್ ಆಡಿ, ಗೋಲ್ ಬಾರಿಸಿರುವ ವೀಡಿಯೋ ವೈರಲ್ ಆಗಿದೆ.

ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ರಾಜೀವ್ ಗಾಂಧಿ ಕಪ್ ಫುಟ್ ಬಾಲ್ ಟೂರ್ನಿಯನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಪಂಚೆ ಎತ್ತಿ ಕಟ್ಟಿ ಕಿಕ್ ಬಾರಿಸುವ ಮೂಲಕ ಫುಟ್ ಬಾಲ್ ಆಟಕ್ಕೆ ಚಾಲನೆ ನೀಡಿದರು. ಸಿದ್ದರಾಮಯ್ಯ ಕಿಕ್ ಬಾರಿಸುವ ವೇಳೆ ನೆರೆದಿದ್ದ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಈ ವೇಳೆ ಸಿದ್ದರಾಮಯ್ಯ ಬಾರಿಸಿದ ಕಿಕ್ ನೇರವಾಗಿ ಗೋಲ್ ಸೇರಿತು. ಸಿದ್ದರಾಮಯ್ಯ ಅವರ ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಂಜುನಾಥ್, ಅನಿಲ್ ಚಿಕ್ಕಮಾದು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್ ಹಾಜರಿದ್ದರು.

Leave A Reply

Your email address will not be published.