ಫೋನ್‌ಗಳಿಂದ ಬಳಕೆದಾರರ ಡೇಟಾವನ್ನು ಕದಿಯಲಾಗುತ್ತಿದ್ದ ಅಪ್ಲಿಕೇಶನ್‌ ಗಳು ಡಿಲೀಟ್|ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಗೂ ನಿಷೇಧ ಹೇರಿದ ಪ್ಲೇಸ್ಟೋರ್

ಅಪ್ಲಿಕೇಶನ್‌ ಗಳ ಮೂಲಕ ಬಳಕೆದಾರರ ಫೋನ್‌ಗಳಿಂದ ಡೇಟಾವನ್ನು ಕದಿಯಲಾಗುತ್ತಿದ್ದ ಕಾರಣಕ್ಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಮೇಲೆ ಮುಸಲ್ಮಾನರ ಪ್ರಸಿದ್ಧ ಪ್ರಾರ್ಥನೆಯ ಆಪ್‌ ಅನ್ನು ನಿಷೇಧಿಸಲಾಗಿದೆ.

ಪ್ಲೇ ಸ್ಟೋರ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಕೆಲವೊಂದು ನೀತಿ, ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಅವುಗಳನ್ನು ಉಲ್ಲಂಘಿಸಿದಾಗ ಗೂಗಲ್‌ ಇಂತಹ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತದೆ.ಗೂಗಲ್, ತನ್ನ ಪ್ಲೇ ಸ್ಟೋರ್‌ನಿಂದ ಸುಮಾರು ಒಂದು ಡಜನ್ ಅಪ್ಲಿಕೇಶನ್‌ಗಳನ್ನು ಸಹ ತೆಗೆದು ಹಾಕಿದ್ದು,ಇವುಗಳಲ್ಲಿ ಬಾರ್‌ಕೋಡ್ ಸ್ಕ್ಯಾನರ್‌ಗಳು ಮತ್ತು ಸಮಯ ಹೇಳುವ ಅಪ್ಲಿಕೇಶನ್‌ಗಳೂ ಸೇರಿವೆ.

ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾದ ಮುಸ್ಲಿಂ ಪ್ರಾರ್ಥನೆಯ ಅಪ್ಲಿಕೇಶನ್ 1 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ. ಟೆಕ್ ಸೈಟ್ Gizmodo ಪ್ರಕಾರ, ಬಳಕೆದಾರರ ಡೇಟಾವನ್ನು ಇಲ್ಲಿ ರಹಸ್ಯವಾಗಿ ಕದಿಯುವ ಕೋಡ್ ಬಳಸಿರುವುದನ್ನು ಗೂಗಲ್‌ ಪತ್ತೆ ಮಾಡಿದೆ. ಈ ರಹಸ್ಯ ಕೋಡ್ ಅನ್ನು ಅಮೆರಿಕದ ಡಿಫೆನ್ಸ್‌ಗೆ ಸಂಬಂಧಿಸಿದ ಕಂಪನಿ ಸಿದ್ಧಪಡಿಸಿದೆ. ಅಮೆರಿಕನ್ ಡಿಫೆನ್ಸ್, ತನ್ನ ಅಪ್ಲಿಕೇಶನ್‌ನಲ್ಲಿ ಸೇರಿಸಲು ಸಾಫ್ಟ್‌ವೇರ್ ಡೆವಲಪರ್‌ಗಳ ಮೂಲಕ ಈ ಕೋಡ್ ಅನ್ನು ಅಭಿವೃದ್ಧಿಪಡಿಸಿತ್ತು.

ಈ ಕೋಡ್ ಸಹಾಯದಿಂದ ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ ಇತ್ಯಾದಿಗಳಿಂದ ವೈಯಕ್ತಿಕ ಡೇಟಾ, ಫೋನ್ ಸಂಖ್ಯೆಗಳು ಇತ್ಯಾದಿಗಳನ್ನು ಕದಿಯಲಾಗುತ್ತಿತ್ತು. ಆಪ್‌ಸೆನ್ಸಸ್, ಇಂತಹ ಅಪ್ಲಿಕೇಶನ್‌ ಗಳ ಪಟ್ಟಿಯನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಾಗ ಡೇಟಾ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. AppCensus ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಆಡಿಟ್ ಮಾಡುವ ಸಂಸ್ಥೆಯಾಗಿದೆ.ಆಡಿಟ್‌ನಲ್ಲಿ ಅಂತಹ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಂಗ್ರಹಿಸಿ, ನಂತರ ಬ್ಲಾಗ್‌ಗೆ ಪೋಸ್ಟ್ ಮಾಡಲಾಗಿದೆ.

Leave A Reply

Your email address will not be published.