ಲಿಂಬೆಹಣ್ಣಿನ ದರ ಕೇಳಿದ ಗ್ರಾಹಕರ ಮುಖದಲ್ಲಿ ಹೆಚ್ಚಾದ ಹುಳಿ
ಊಟಕೆ ಉಪ್ಪಿನಕಾಯಿ ಎಷ್ಟು ಮುಖ್ಯವೊ ಹಾಗೆ ಅಡುಗೆಗೆ ಲಿಂಬೆಹಣ್ಣು ಅಷ್ಟೇ ಮುಖ್ಯ. ಉಪ್ಪು ಹುಳಿ ತಿಂದು ಬೆಳೆದ ದೇಹ ಇದು ಎಂದು ಹೆಮ್ಮೆಯಿಂದ ಹೇಳಲು ಹುಳಿಗೆ ಲಿಂಬೆ ಅತಿ ಪ್ರಾಮುಖ್ಯ. ಕೆಲವೆಡೆ ಅಮವಾಸ್ಯೆ ಗಾಡಿ ಪೂಜೆಗೂ ಲಿಂಬೆಕಾಯಿ ಇಡುತ್ತಾರೆ.
ದಿನನಿತ್ಯ ಬಳಕೆಗೆ ಬೇಕಾಗುವ ಲಿಂಬೆ ಹಣ್ಣಿನ ಬೆಲೆ ಮುಖವನ್ನು ಹುಳಿ ಮಾಡುತ್ತಿದೆ. ಏಕೆಂದರೆ ಬೆಲೆ ಧೀಡಿರನೆ ಗಗನಕ್ಕೇರಿದೆ. ಬೇಸಿಗೆಯ ತಾಪಮಾನಕ್ಕಂತೂ ಲಿಂಬೆ ಹಣ್ಣಿನ ಪಾನಕ , ಲೆಮೆನ್ ಸೋಡಾ ಕುಡಿದು ಬಾಯಾರಿಗೆ ಕಳೆದುಕೊಳ್ಳುವ ಜನ ಬೆಲೆ ಕೇಳಿ ಬಾಯಿ ಬಿಡುತ್ತಿದ್ದಾರೆ.
ಹಲವೆಡೆ ಪೇಟೆ ಮಾರುಕಟ್ಟೆಗಳಲ್ಲಿ ಲಿಂಬೆಹಣ್ಣಿನ ಬೆಲೆ 1 kg ಗೆ 300 ರೂಪಾಯಿವರೆಗೂ ಆಗಿದೆ. ಕಳೆದ ತಿಂಗಳು 10 ರೂ.ಕೊಟ್ಟರೆ ಆರೇಳು ಲಿಂಬೆಹಣ್ಣುಗಳನ್ನು ಕೊಡುತ್ತಿದ್ದ ವ್ಯಾಪಾರಸ್ಥರು, ಈಗ ಅದೇ 10 ರೂ.ಗಳಿಗೆ ಕೇವಲ 2 ಲಿಂಬೆಹಣ್ಣು ಕೊಡುತ್ತಾರೆ.
ಅಂತರ್ಜಲ ಕುಸಿತದ ಪರಿಣಾಮ ಬೆಳೆಗಾರರ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆಯಾಗಿದ್ದು ಮಾಲು( ಬೆಳೆ) ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.