ಕಡಬ : ಮದುವೆಗೆ ಮೊದಲೇ ‘ಮೊದಲ ರಾತ್ರಿ’ ನಡೆಸಿದ ಯುವಕ ಯುವತಿ| ಗರ್ಭಿಣಿಯಾದ ನಂತರ ಹುಡುಗನ ವರಸೆ ಬದಲು|

ಯುವತಿಯನ್ನು ಪ್ರೀತಿಸಿ, ಆಕೆಗೆ ಆಸೆ ತೋರಿಸಿ ನಂತರ ಸರಸ ಸಲ್ಲಾಪ ನಡೆಸಿ, ಕಡೆಗೆ ಆಕೆ ಗರ್ಭಿಣಿ ಎಂದು ಗೊತ್ತಾದಾಗ ಈ ಮಗು ನನ್ನದಲ್ಲ ಎಂದು ಹೇಳಿ ಮಾನಸಿಕ ಕಿರುಕುಳ ನೀಡಿದ ಪ್ರಕರಣವೊಂದು ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

ಆರೋಪಿ ಯುವಕ ದೀಕ್ಷಿತ್ ಎಂದು ಗುರುತಿಸಲಾಗಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವಳ ಸಂಬಂಧಿ ದೀಕ್ಷಿತ್ ಆಗಾಗ ಮನೆಗೆ ಬರುತ್ತಿದ್ದ. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಮುಂದೆ ಹೇಗೂ ಮದುವೆಯಾಗಲಿದ್ದೇವೆ ಎಂದು ನಂಬಿಸಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಆತ ದೂರದೂರಿಗೆ ಕೆಲಸದ ನಿಮಿತ್ತ ಹೋಗಿದ್ದಾನೆ. ಇತ್ತಕಡೆ ಯುವತಿ ಗರ್ಭವತಿಯಾಗಿದ್ದಾಳೆ. ಗರ್ಭಿಣಿಯಾದ ವಿಷಯ ಇಬ್ಬರ ಮನೆಯವರಿಗೆ ತಿಳಿದು ವಿವಾಹ ಮಾಡಲು ನಿರ್ಧರಿಸಿರುತ್ತಾರೆ.
ಆಗ ದೀಕ್ಷಿತ್ ಆಕೆ ಗರ್ಭ ಧರಿಸಲು ತಾನೇ ಕಾರಣ ಹಾಗೂ ಆಕೆಯನ್ನು ವಿವಾಹವಾಗುತ್ತೇನೆ ಎಂದು ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಬರವಣಿಗೆ ಮುಖಾಂತರ ಒಪ್ಪಿ ಸಹಿ ಮಾಡಿ ಪತ್ರ ನೀಡಿರುತ್ತಾನೆ.

2021ರ ಆ.05 ರಂದು ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ನಂತರ 2021ರ ನ.15ರಂದು ದೀಕ್ಷಿತ್ ಊರಿಗೆ ಬಂದು ಯುವತಿಯ ಮನೆಯವರೊಂದಿಗೆ ಮಾತನಾಡಿ ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹ ಮಾಡಿಕೊಂಡಿದ್ದಾನೆ.

ಮದುವೆಯಾದ ದಿನವೇ ದೀಕ್ಷಿತ್ ಮರಳಿ ಕರ್ತವ್ಯಕ್ಕೆ ತೆರಳಿದ್ದಾನೆ. ನಂತರದ ಆತ ದೂರವಾಣಿ ಕರೆ ಮಾಡಿ,ಮಗು ನನ್ನದಲ್ಲ. ನೀನು ಕೆಟ್ಟವಳು,
ನಾನು ಡಿಎನ್ಎ ಟೆಸ್ಟ್ ಮಾಡಿಸುತ್ತೆನೆ. ನಿನ್ನ ಮೇಲೆ ಮನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಿಂದಿಸಿ ವರದಕ್ಷಿಣೆ ಕೊಡಬೇಕು ಎಂದು ಕಿರುಕುಳ ನೀಡಿದ್ದಾನೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಯುವತಿ ದೂರನ್ನು ನೀಡಿದ್ದಾಳೆ.

Leave A Reply

Your email address will not be published.