ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶದ ವೇಳೆ ಇಬ್ಭಾಗಗೊಂಡ ವಿಮಾನ !!

0 56

ತುರ್ತು ಭೂಸ್ಪರ್ಶದ ವೇಳೆ ಸರಕು ವಿಮಾನವೊಂದು ಪೈಲಟ್ ನ ನಿಯಂತ್ರಣ ತಪ್ಪಿ ಇಬ್ಭಾಗವಾಗಿರುವ ಘಟನೆ ಕೋಸ್ಟರಿಕಾದ ಸ್ಯಾನ್ ಜೋಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಜರ್ಮನ್ ಲಾಜಿಸ್ಟಿಕ್ಸ್ ದೈತ್ಯ ಸಂಸ್ಥೆ ಡಿಎಚ್‌ಎಲ್‌ಗೆ ಸೇರಿದ ವಿಮಾನದಿಂದ ಹೊಗೆ ಹೊರಹೊಮ್ಮುತ್ತಿತ್ತು. ವಿಮಾನ ರನ್‌ವೇಯಲ್ಲಿ ಇಳಿಯುವಾಗ ಪಕ್ಕಕ್ಕೆ ಸರಿದು ಎರಡು ತುಂಡಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಅಪಘಾತದಿಂದಾದಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

Leave A Reply