ಈ ದೇಶಗಳ ಪಾಸ್‌ಪೋರ್ಟ್ ಕಳಪೆ! ಈ ದೇಶಗಳ ಪಾಸ್‌ಪೋರ್ಟ್ ಉತ್ತಮ
ಹೆನ್ಲಿ ಸಂಸ್ಥೆಯ ಪಾಸ್‌ಪೋರ್ಟ್ ಇಂಡೆಕ್ಸ್ ಬಿಡುಗಡೆಯಾಗಿದೆ. ಯಾವ್ಯಾವ ದೇಶಗಳ ಟ್ರಾವೆಲ್ ಡಾಕ್ಯುಮೆಂಟ್‌ಗಳಿಗೆ ಎಷ್ಟು ದೇಶಗಳಲ್ಲಿ ಮಾನ್ಯತೆ ಇದೆ ಅನ್ನೋದ್ರ ಆಧಾರದ ಮೇಲೆ ಹೆನ್ಲಿ ಸಂಸ್ಥೆ ಈ ರ್ಯಾಂಕಿಂಗ್‌ನ್ನ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡುತ್ತದೆ.
ಯಾವ ದೇಶದ ಪಾಸ್‌ಪೋರ್ಟ್ ಕಳಪೆ ? ಯಾವ ಯಾವ ದೇಶದ ಪಾಸ್‌ಪೋರ್ಟ್ ಉತ್ತಮ ಎಂದು ಇಲ್ಲಿದೆ ನೋಡಿ.
109ನೇ ರ್ಯಾಂಕ್‌ನಲ್ಲಿರೋ ಪಾಕ್ ಪಾಸ್‌ಪೋರ್ಟ್ ಮೂಲಕ 31 ಸ್ಥಳಗಳಿಗೆ ಮಾತ್ರ ವೀಸಾ ಇಲ್ಲದೇ ಹೋಗ್ಬಹುದಾಗಿದೆ.
ಸಿರಿಯಾ, ಇರಾಕ್ ಮತ್ತು ಅಫಘಾನಿಸ್ತಾನ ದೇಶಗಳ ಪಾಸ್‌ಪೋರ್ಟ್‌ಗಳು ಅತ್ಯಂತ ಕಳಪೆ ಎಂದು ಮೊದಲ ಮೂರು ಸ್ಥಾನ ಪಡೆದಿವೆ. ಜಪಾನ್ ಮತ್ತು ಸಿಂಗಪೂರ್ ಪಾಸ್‌ಪೋರ್ಟ್ ಬೆಸ್ಟ್ ಪಾಸ್ಪೋರ್ಟ್ಗಳೆನಿಸಿವೆ.
ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನದಲ್ಲಿದ್ದು, ಉತ್ತಮತೆ ಪಡೆದುಕೊಂಡಿದೆ. ಭಾರತದ ಪಾಸ್ ಪೋರ್ಟ್ ಇದ್ದರೆ ವೀಸಾ ಇಲ್ಲದೇ 59 ದೇಶಗಳಿಗೆ ವೀಸಾ ರಹಿತರಾಗಿ ಹೋಗಬಹುದಾಗಿದೆ.