ಮಲ್ಪೆ : ಸೈಂಟ್ ಮೆರೀಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದ ಮೂವರು ವಿದ್ಯಾರ್ಥಿಗಳು ನೀರುಪಾಲು| ಇಬ್ಬರ ಮೃತದೇಹ ಪತ್ತೆ|

ಮಲ್ಪೆ: ಪ್ರವಾಸಕ್ಕೆಂದು ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ದುರದೃಷ್ಟಕರ ಘಟನೆಯೊಂದು ಇಂದು ಸಂಭವಿಸಿದೆ. ನೀರುಪಾಲಾದವರು ಕೇರಳದ ಕೊಟ್ಟಾಯಂನ ವಿದ್ಯಾರ್ಥಿಗಳು.

 

42 ಮಂದಿಯಿದ್ದ
ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಮಲ್ಪೆಗೆ ಪ್ರವಾಸಕ್ಕೆಂದು ಬಂದಿತ್ತು. ವಿದ್ಯಾರ್ಥಿಗಳ ಜೊತೆ ಇಬ್ಬರು ಉಪನ್ಯಾಸಕರೂ ಇದ್ದರು. ನೀರಿನಲ್ಲಿ ಆಡುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

ಇದೀಗ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು ಮುಳುಗಡೆಯಾದ ಮತ್ತೋರ್ವ ವಿದ್ಯಾರ್ಥಿಗೆ ಶೋಧ ನಡೆದಿದೆ. ಅಲೆನ್ ರೇಜಿ, ಅಮಲ್ ಸಿ ಅನಿಲ್, ಅಂಟೋನಿ ಶೆಣೈ ಮುಳುಗಡೆಯಾದವರು. ಅಂಟೋನಿ ಶೆಣೈ ಎಂಬಾತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

Leave A Reply

Your email address will not be published.