ಹಿಜಾಬ್ ಸಂಘರ್ಷ ವಿವಾದ : ವಿದ್ಯಾರ್ಥಿಗಳನ್ನು ಬೆಂಬಲಿಸುವವರು ಭಯೋತ್ಪಾದಕರೆಂಬುದು ಸಾಬೀತು-ಯಶ್ ಪಾಲ್ ಸುವರ್ಣ
ಉಡುಪಿ : ಹಿಜಾಬ್ ಸಂಘರ್ಷಕ್ಕೆ ಕಾರಣರಾದ 6 ಮಂದಿ ವಿದ್ಯಾರ್ಥಿಗಳನ್ನು ಆಲ್ಖೈದಾ ನಾಯಕರು ಬೆಂಬಲಿಸುತ್ತಿರುವುದು ನೋಡಿದರೆ ಈ ವಿದ್ಯಾರ್ಥಿಗಳು ಮತ್ತೆ ಟೆರೆರಿಸ್ಟ್ ಸಂಘಟನೆಯ ಸದಸ್ಯರು ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಯಶ್ಪಾಲ್ ಸುವರ್ಣ ಅವರು, ಈ 6 ಜನ ವಿದ್ಯಾರ್ಥಿಗಳನ್ನು ಭಯೋತ್ಪಾಕ ಸಂಘಟನೆಗಳು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ್ದೆ. ಇದೀಗ ಮತ್ತೆ ಈ ವಿದ್ಯಾರ್ಥಿಗಳನ್ನು ಆಲ್ ಖೈದ ನಾಯಕರು ಬೆಂಬಲಿಸಿದ್ದು, ಈ ವಿದ್ಯಾರ್ಥಿಗಳು ಮತ್ತೆ ಟೆರೆರಿಸ್ಟ್ ಸಂಘಟನೆಯ ಸದಸ್ಯರು ಎಂದು ಸಾಬೀತಾಗಿದೆ. ಈ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಅವರಿಗೆ ಸಹಕರಿಸಿದವರ ಮೇಲೆ ಎನ್ಐಎ ತನಿಖೆ ನಡೆಸಿ ಸೂಕ್ತ ಶಿಕ್ಷೆ ನೀಡಬೇಕು. ಈ ಬಗ್ಗೆ ಸರಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಹೈಕೋರ್ಟ್ ನ್ಯಾಯಧೀಶರ ಬಗ್ಗೆ ಹಗುರವಾದ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದ ಕಾನೂನಾತ್ಮಕ ವ್ಯವಸ್ಥೆಯನ್ನು ಧಿಕ್ಕರಿಸುವಂತಹ ಕೆಲಸ ನಡೆಯುತ್ತಿದೆ. ಇದು ಕೇವಲ ಎಸ್.ಡಿ.ಪಿ.ಐ, ಸಿಎಫ್ಐ ಪಿಎಫ್ ಐ ಸಂಘಟನೆಗಳ ಕೆಲಸವಲ್ಲ ಇದರ ಹಿಂದೆ ಬಹು ದೊಡ್ಡ ದೇಶದ್ರೋಹಿ ಸಂಘಟನೆಗಳಾದ ಅಲ್ ಖೈದಾ ಹಾಗೂ ಇನ್ನಿತರ ಸಂಘಟನೆಯ ಕೈವಾಡ ಇದೆ. ಸಂಘಟನೆಯ ಬಹಳಷ್ಟು ಜನರು ಶರಿಯತ್ ಕಾನೂನು ಬಗ್ಗೆ ಮಾತನಾಡುತ್ತಾರೆ. ಈ ಬೆಳವಣಿಗೆ ವಿರುದ್ಧ ಶರಿಯತ್ ಕಾನೂನಿನಂತೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ನಾವು ಹಿಂದೂ ರಾಷ್ಟ್ರ ನಿರ್ಮಾಣದ ಕಲ್ಪನೆಯ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದ ಅವರು 6 ಜನ ವಿದ್ಯಾರ್ಥಿಗಳಿಂದ ಸೃಷ್ಟಿಯಾದ ಗೊಂದಲದಿಂದ ಅಲ್ಪಸಂಖ್ಯಾತರು ಇಂದು ಸಮಸ್ಯೆ ಎದುರಿಸುವಂತಾಗಿದೆ, ಇದು ಇನ್ನಷ್ಟು ಮುಗ್ಧ ಮಕ್ಕಳ ಮೇಲೆ ಪ್ರಭಾವ ಆಗುವ ಸಾಧ್ಯತೆ ತಪ್ಪಿಸಬೇಕು. ಉಡುಪಿಗೆ ವಿದ್ಯಾರ್ಥಿಗಳಿಗೆ, ಕುಟುಂಬಕ್ಕೆ ಬಹಿಷ್ಕಾರ ಹಾಕಬೇಕಾಗುತ್ತದೆ. ಗೆಲ್ಲು, ಕಾಂಡ ಕತ್ತರಿಸಿದರೆ ಸಾಲದು ಬೇರು ಸಮೇತ ಕಿತ್ತುಹಾಕಬೇಕು ಎಂದರು.
ಹಿಜಬ್, ವ್ಯಾಪಾರ ಬಹಿಷ್ಕಾರ, ಆಜಾನ್ ನಿಯಂತ್ರಣ ವಿಚಾರ ಅವರು ಮಾಡಿದ ಕರ್ಮ ಅವರು ತಿನ್ನುತ್ತಿದ್ದಾರೆ. ನಾವು ಮುಸಲ್ಮಾನರ ಮೇಲೆ ಅವಲಂಬಿತರಾಗಿ ಇರಬೇಕಾಗಿಲ್ಲ ಎಂದ ಅವರು, ಮುಸಲ್ಮಾನರು ಗದ್ದೆ ಬೇಸಾಯ ಮಾಡುವವರು ಇಲ್ಲ. ಕೆಲವರು ತಿರುಚುವ ಹೇಳಿಕೆ ನೀಡಿದ್ದಾರೆ. ಹೊಟ್ಟೆಪಾಡಿಗೆ ಸಮಸ್ಯೆ ಆದಾಗ ದೇಶ ವಿರೋಧಿ ಚಟುವಟಿಕೆಗಳು ಇದ್ದರೂ ಕೂಡ ದೇಶದ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.