‘ಹಿಂದೂ ಹುಡುಗರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ, ಹೀಗಾಗಿ ಆಕೆ ಬಚಾವಾಗಿದ್ದಾಳೆ’ | ಮುಸ್ಕಾನ್ ಖಾನ್ ಕುರಿತು ಸಿ ಟಿ ರವಿ ವಿವಾದಾತ್ಮಕ ಹೇಳಿಕೆ

Share the Article

ಬೆಂಗಳೂರು: ಮಂಡ್ಯದ ಮುಸ್ಕಾನ್ ಖಾನ್ ಗೆ ಅಲ್‌ಖೈದಾ ಉಗ್ರ ನಾಯಕ ಹೊಗಳಿದ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಆವತ್ತು ಆಕೆ ಸುರಕ್ಷಿತವಾಗಿ ಮನೆಗೆ ಬರಲು ಕಾರಣ ಅಲ್ಲಿದ್ದ ಹಿಂದೂ ಹುಡುಗರು ಎಂದು ಹೇಳಿದ್ದಾರೆ.

ಅವತ್ತು ಹಿಂದೂ ಹುಡುಗರ‌ ಜಾಗದಲ್ಲಿ ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿ ಇದ್ದಿದ್ದರೆ ಆಕೆ ಸುರಕ್ಷಿತವಾಗಿ ಹೋಗುತ್ತಿರಲಿಲ್ವೇನೋ? ಯಾಕೆಂದರೆ ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು, ಆದರೆ ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ. ಹಾಗಾಗಿ ಆಕೆ ಬಚಾವಾಗಿದ್ದಾಳೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಸಿಟಿ ರವಿ.

ಹಿಜಾಬ್ ನ ಹೆಸರಿನಲ್ಲಿ ಸಮಾಜ ಒಡೆಯುವ ಸಂಚು ಇದೆ ಅನ್ನಿಸುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೀಬೇಕು. ಹಿಜಾಬ್ ವಿವಾದದ ಹಿಂದೆ ಬೇರೆಯದೇ ಸಂಚು ಇದೆ ಅನ್ನಿಸುತ್ತದೆ. ನೂರಾರು ಸಂಸ್ಕೃತಿ, ವೈವಿಧ್ಯತೆಯ ನಮ್ಮ ರಾಷ್ಟ್ರ ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Leave A Reply