ಈ ಸಂವತ್ಸರದಲ್ಲಿನ ಸೂರ್ಯ ಮತ್ತು ಚಂದ್ರ ಗ್ರಹಣದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

2022 ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರಗ್ರಹಣಗಳು ಸಂಭವಿಸಲಿವೆ. ನಾಲ್ಕು ಗ್ರಹಣಗಳ ದಿನಾಂಕ ಮತ್ತು ಸಮಯವನ್ನು ಇಲ್ಲಿ ವಿವರಿಸಲಾಗಿದೆ.

 

ವರ್ಷದ ಮೊದಲ ಸೂರ್ಯಗ್ರಹಣವು 30 ಏಪ್ರಿಲ್ 2022 ರಂದು ಸಂಭವಿಸಲಿದೆ. ಇದು ಮಧ್ಯಾಹ್ನ 12:15 ರಿಂದ ಸಂಜೆ 4:7 ರವರೆಗೆ ಇರುತ್ತದೆ. ಇದು ಭಾಗಶಃ ಗ್ರಹಣವಾಗಿದ್ದು, ದಕ್ಷಿಣ/ಪಶ್ಚಿಮ ಅಮೆರಿಕ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ.

ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ಸಂಭವಿಸಲಿದೆ, ಇದು ಭಾಗಶಃ ಗ್ರಹಣ ರೂಪದಲ್ಲಿರಲಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಗ್ರಹಣವು ಸಂಜೆ 4:29 ರಿಂದ 5:42 ರವರೆಗೆ ಸಂಭವಿಸುತ್ತದೆ. ಈ ಬಾರಿ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಅಟ್ಲಾಂಟಿಕಾದಲ್ಲಿ ಗ್ರಹಣ ಗೋಚರಿಸಲಿದೆ.

2022 ರ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲಿದೆ. ಈ ಗ್ರಹಣ ಬೆಳಗ್ಗೆ 7.02 ರಿಂದ 12.20 ರವರೆಗೆ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವು ಸಂಪೂರ್ಣ ಗ್ರಹಣವಾಗಲಿದೆ ಮತ್ತು ಇದನ್ನು ಭಾರತದಲ್ಲಿಯೂ ಕಾಣಬಹುದು. 

ಮೇ 16 ರ ನಂತರ, ವರ್ಷದ ಎರಡನೇ ಚಂದ್ರಗ್ರಹಣ ನವೆಂಬರ್ 8 ರಂದು ಸಂಭವಿಸುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವೂ ಆಗಲಿದೆ. ಮಧ್ಯಾಹ್ನ 1.32ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ರಾತ್ರಿ 7.27ರವರೆಗೆ ನಡೆಯಲಿದೆ.

Leave A Reply

Your email address will not be published.