ಪ್ರಿಯತಮೆಗೆ ಪ್ರಿಯಕರ ಕೊಟ್ಟ ಸರ್ಪೈಸ್ ಏನು ಗೊತ್ತೇ? ಇವರ ಫೋಟೋ ಶೂಟ್ ವಿಚಿತ್ರ
ಪ್ರೇಮಿಗಳು ಸರ್ಪೈಸ್ ಕೊಟ್ಟುಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಪ್ರಿಯಕರ ಪ್ರಿಯತಮೆಗೆ ಕೊಟ್ಟ ಸರ್ಪೈಸ್ ವಿಚಿತ್ರ. ಹಾಗೆ ಪ್ರೇಮಿಗಳು ಎಲ್ಲೆಲ್ಲೋ ಫೋಟೋ ಶೂಟ್ ಮಾಡಿಸುತ್ತಾರೆ. ಕಾಡುಗಳಲ್ಲಿ, ತೋಟಗಳಲ್ಲಿ, ಪಾರ್ಕ್ ಗಳಲ್ಲಿ ಜಾಗಕ್ಕೆ ಬರವಿಲ್ಲ. ವೈವಿಧ್ಯಮಯವಾಗಿ ಫೋಸ್ ಕೊಟ್ಟು ಪೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಜೋಡಿ ಫೋಟೋ ಶೂಟ್ ಮಾಡಲು ದೊಡ್ಡ ಹರಸಾಹಸಕ್ಕೆ ಕೈ ಹಾಕಿದೆ.
ಕೆರೆಗಳಲ್ಲಿ ನದಿ ಸಮುದ್ರಗಳಲ್ಲಿ ಮೀನು ಹಿಡಿಯುತ್ತಿರುವ ದೃಶ್ಯ ನೀವು ನೋಡಿರಬಹುದು ಹಾಗೆ ಇಲ್ಲೊಬ್ಬ ಯುವಕ ದೊಡ್ಡ ಮೀನನ್ನು ಹಿಡಿದು ಸುದ್ದಿಯಾಗಿದ್ದಾನೆ. ಅವನು ಮತ್ತು ಅವನ ಗೆಳತಿ ಸಿಡ್ನಿ ಕೊಜೆಲೆಂಕೊ ಫ್ರೇಸರ್ ನದಿಯ ಮೀನುಗಾರಿಕೆ ಸ್ಥಳಕ್ಕೆ 3-ಗಂಟೆಗಳ ಕಾಲ ಡ್ರೈವ್ ಮಾಡಿ ತಲುಪಿದ್ದಾರೆ. ದೊಡ್ಡ ಮೀನನ್ನು ದಡಕ್ಕೆ ಹತ್ತಿರವಾಗಿಸುವುದು ಸುಮಾರು ಅರ್ಧ ಗಂಟೆ ಕೆಲಸವಾಗಿತ್ತು. ಇದು ಆಕೆ ಸರ್ಪೈಸ್ .
159 ಕಿಲೋಗ್ರಾಂಗಳಷ್ಟು ತೂಕವಿರುವ ‘ಲಿವಿಂಗ್ ಡೈನೋಸಾರ್’ ಎಂದು ಕರೆಯಲ್ಪಡುವ 8 ಅಡಿ 6 ಇಂಚು ಉದ್ದದ ಸ್ಟರ್ಜನ್ಗೆ ಗಾಳ ಹಾಕಿ ಅದನ್ನು ಹಿಡಿದಿದ್ದಾರೆ. ನಂತರ ಈ ಮೀನನ್ನು ಹಿಡಿದು ಅದರೊಡನೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.