ಜೊಮ್ಯಾಟೊ ಸ್ವಿಗ್ಗಿ ವಿರುದ್ಧ ಸಿಸಿಐ ತನಿಖೆ

Share the Article

ಬೃಹತ್ ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್‌ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿಯ ನಡವಳಿಕೆಯ ಬಗ್ಗೆ ತನಿಖೆ ನಡೆಸಲು ಭಾರತದ ಆಂಟಿಟ್ರಸ್ಟ್ ಸಂಸ್ಥೆ ಏಪ್ರಿಲ್ 4ರಂದು ಆದೇಶಿಸಿದೆ.

ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ತನ್ನ ಡಿಜಿಗೆ ವಿವರವಾದ ತನಿಖೆ ನಡೆಸಿ 60 ದಿನಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಅತಿಯಾದ ಕಮಿಷನ್‌ನಂತಹ ಆರೋಪಗಳನ್ನು ಎದುರಿಸುತ್ತಿದೆ ಹೀಗಾಗಿ ತನಿಖೆಯ ಅಗತ್ಯವಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆದೇಶಿಸಿದೆ.

ಸ್ವಿಗ್ಗಿ ಮತ್ತು ಜೊಮ್ಯಾಟೊ ಜೊತೆಗಿನ ಒಪ್ಪಂದದ ನಿಯಮಗಳಲ್ಲಿ ಇರುವ ಕೆಲವು ಅಂಶಗಳು ರೆಸ್ಟಾರೆಂಟ್‌ ಪಾಲುದಾರರಿಗೆ ಕನಿಷ್ಠ ಬೆಲೆಯನ್ನು ಕಾಯ್ದುಕೊಳ್ಳಲು ಅವಕಾಶ ಕೊಡುತ್ತಿಲ್ಲ  ಎಂದು ಸಿಸಿಐ ಹೇಳಿದೆ. ಜೊಮ್ಯಾಟೊ ಮತ್ತು ಸ್ವಿಗ್ಗಿಯ ಕೆಲವು ನಡವಳಿಕೆಗಳಿಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಪ್ರಕರಣ ಅಸ್ತಿತ್ವದಲ್ಲಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

Leave A Reply