ರಂಜಾನ್ ಪ್ರಯುಕ್ತ ಮುಸ್ಲಿಂ ನೌಕರರಿಗೆ ಕಚೇರಿಯಿಂದ ಒಂದು ಗಂಟೆ ಮುಂಚಿತವಾಗಿ ತೆರಳಲು ಅವಕಾಶ ನೀಡಿದ ಸರ್ಕಾರ !!

ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಈಗಾಗಲೇ ಆರಂಭವಾಗಿದೆ. ಈ ಒಂದು ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಈ ಬಾರಿ ರಂಜಾನ್ ಏಪ್ರಿಲ್ 2, ಶನಿವಾರದಿಂದ ಆರಂಭವಾಗಿದ್ದು ಮೇ 2 ಕ್ಕೆ ಮುಕ್ತಾಯಗೊಳ್ಳಲಿದೆ.

 

ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರಿಗೆ ತೆಲಂಗಾಣ ಸರ್ಕಾರ ಭರ್ಜರಿ ರಿಯಾಯಿತಿ ನೀಡಿದ್ದು, ಪವಿತ್ರ ರಂಜಾನ್ ತಿಂಗಳ ಉಪವಾಸ ಹಿನ್ನೆಲೆ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಮನೆಗೆ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಸರ್ಕಾರಿ ಇಲಾಖೆಗಳಿಗೆ ಆದೇಶ ಹೊರಡಿಸಿದ್ದು, ಸರ್ಕಾರಿ ಆದೇಶದ ಪ್ರಕಾರ ಮುಸ್ಲಿಂ ನೌಕರರು ಏಪ್ರಿಲ್ 2ರಿಂದ ಮೇ 2ರವರೆಗೆ ಸಂಜೆ 5 ಗಂಟೆಯ ಬದಲಾಗಿ 4 ಗಂಟೆಗೆ ಕಚೇರಿಯಿಂದ ಮನೆಗೆ ತೆರಳಬಹುದು.

ಸಂಜೆ 6 ರಿಂದ 6: 45 ರ ಒಳಗೆ ಮುಸ್ಲಿಂ ನೌಕರರಿಗೆ ಉಪವಾಸ ತೊರೆಯುವ ಅಗತ್ಯ ಇರುವ ಹಿನ್ನೆಲೆ ಸರ್ಕಾರ ಒಂದು ಗಂಟೆ ಮುಂಚಿತವಾಗಿ ತೆರಳಲು ಅವಕಾಶ ಕಲ್ಪಿಸಿದೆ.

Leave A Reply

Your email address will not be published.